ಶಶಿಕಲಾರಿಗೆ ಜೈಲಿನಲ್ಲಿ ಮನೆ ಊಟ ಅವಕಾಶ ಕಲ್ಪಿಸಲು ನ್ಯಾಯಾಧೀಶರು ನಕಾರ
Update: 2017-02-15 18:27 IST
ಬೆಂಗಳೂರು, ಫೆ.15: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಿಂದ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರು ಮನೆ ಊಟ ಅವಕಾಶ ಕಲ್ಪಿಸುವಂತೆ ಮಾಡಿರುವ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು.
ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾ.ಅಶ್ವತ್ಥ್ ನಾರಾಯಣ್ ಅವರ ಮುಂದೆ ಇಂದು ಹಾಜರಾದ ಶಶಿಕಲಾ ನಟರಾಜನ್ ಶುಗರ್ ಸಮಸ್ಯೆ ಇರುವುದರಿಂದ ಮನೆಯಿಂದ ಊಟ ತರಿಸಲು ಅವಕಾಶ ಕಲ್ಪಿಸುವಂತೆ ಮತ್ತು ಧ್ಯಾನಕ್ಕಾಗಿ ವಿಶೇಷ ಕೊಠಡಿ ನೀಡುವಂತೆ ಮಾಡಿದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. ಆದರೆ ಔಷಧಿ ಇಟ್ಟುಕೊಳ್ಳಲು ಜಡ್ಜ್ ಅನಮತಿ ನೀಡಿದರು.
ಶರಣಾಗತಿಯ ಪ್ರಕ್ರಿಯೆ ಮುಗಿದ ಬಳಿಕ ವಿ.ಕೆ. ಶಶಿಕಲಾ ಮತ್ತು ಜೆ. ಇಳವರಸಿ ಅವರನ್ನು ನ್ಯಾಯಾಧೀಶರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.