ಶೀಘ್ರದಲ್ಲಿ ಯೋಗೇಶ್ ಮಾಸ್ಟರ್‌ರ ‘ಮರಳಿ ಮನೆಗೆ ’ ಬೆಳ್ಳಿತೆರೆಗೆ

Update: 2017-02-15 16:29 GMT

ಮಂಗಳೂರು,ಫೆ.15; ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯವನ್ನು ಒಳಗೊಂಡ ವಿಶಿಷ್ಟ ಚಲನ ಚಿತ್ರ ಮರಳಿ ಮನೆಗೆ ಮಾರ್ಚ್ ಕೊನೆ ವಾರದಲ್ಲಿ ರಾಜ್ಯದ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಯೋಗೇಶ್ ಮಾಸ್ಟರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ‘‘ಹದಿನೆಂಟು ವರುಷದ ಹಿಂದೆ ನಾನೆ ರಚಿಸಿದ ಮರಳಿ ಮನೆಗೆ ಕಾದಂಬರಿ ಆಧಾರಿತ ಚಲನ ಚಿತ್ರ ಇದಾಗಿದೆ.ಈ ಚಿತ್ರಕಥೆ ತಾರಾಗಣಗಳ ಸುತ್ತ ತಿರುಗುವ ಬಹುತೇಕ ಸಿನಿಮಾಗಳಿಗಿಂತ ಭಿನ್ನವಾಗಿ ವಾಗಿದೆ.ಸಮಾಜದ ಅತ್ಯಂತ ಚಿಕ್ಕ ಘಟಕವಾದ ಕುಟುಂಬದ ವೌಲ್ಯಗಳನ್ನು ಕೇಂದ್ರೀಕರಿಸುವ ಈ ಚಿತ್ರ ಕುಟುಂಬಗಳು ಒಡೆದು ಹೋಗುತ್ತಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ.ಇಂತಹ ಸಮಾಜದ ಜನರ ನಡುವೆ ಇನ್ನೂ ಪ್ರಭಾವ ಶಾಲಿಯಾದ ಚಲನಚಿತ್ರ ಮಾಧ್ಯಮದ ಮೂಲಕ ಸಮಾಜಕ್ಕೆ ಅಗತ್ಯವಿದೆ ಎನ್ನುವ ಉದ್ದೇಶದಿಂದ ಈ ಚಲನ ಚಿತ್ರ ತಂದಿದ್ದೇನೆ.

ಚಿಕ್ಕ ಪುಟ್ಟ ಘಟನೆಗಳಿಗಾಗಿ ,ಹಟಗಳಿಗಾಗಿ ಕೌಟುಂಬಿಕ ಸಂಬಂಧಗಳನ್ನು ತೊರೆಯುವ ಮತ್ತು ಬಳಿಕ ಪರಿತಾಪ ಪಡುವ ಜನರನ್ನು ಮತ್ತು ಅವರು ಮನೆಗೆ ಮರಳಿ ಬರಲಿ ಎಂದು ಹಾತೊರೆಯುವ ಕುಟುಂಬದ ಸದಸ್ಯರನ್ನು ಮತ್ತೆ ಕೌಟುಂಬಿಕ ಸಂಬಂಧಗಳ ಒಳಗೆ ತರುವ ನೈಜ ಘರ್ ವಾಪಸಿ ಅಂದರೇನು ಎಂದು ವಿವರಿಸುವ ಚಲನ ಚಿತ್ರ ಇದಾಗಿದೆ.ಮರಾಠಿ ಕುಟುಂಬವೊಂದು ಪ್ರಧಾನವಾಗಿರುವ ಈಚಿತ್ರದಲ್ಲಿ ಮರಾಠಿ ಭಾಷೆಯ ಪ್ರಯೋಗವೂ ಇದ್ದು ಅದಕ್ಕೆ ಕನ್ನಡದ ಉಪ ಶೀರ್ಷಕೆಗಳನ್ನು ನೀಡಲಾಗಿದೆ.ಸಂತ ಸಾವತಿ ಮತ್ತು ಸಂತ ಜ್ಞಾನೇಶ್ವರ ರಚಿತ ಮರಾಠಿ ಅಭಂಗಗಳಗೀತೆಗಳನ್ನು ಅಳವಡಿಸಿಕೊಳ್ಳಲಾಗಿದೆ.ರಂಗಭೂಮಿಯ ಮೂಲಕ ಸಾಮಾಜಿಕ ಕಾಳಜಿಯ ನಾಟಕವನ್ನು ಜನರಿಗೆ ನೀಡಿದಾಗ ಅದರಿಂದ ಪ್ರಭಾವಗೊಂಡ ಜನರನ್ನು ಕಂಡು ಬಾಲ್ಯದಲ್ಲಿ ಹರಿದಾಸರು ಹೇಳುತ್ತಿದ್ದ ಹರಿಕಥೆಗಳ ,ಉಪಕಥೆಗಳ ಮಾದರಿಗಳನ್ನು ಬಳಸಿಕೊಂಡು ಕಥೆ ಬರೆಯುವ ಮೂಲಕ ನನ್ನ ವಿಚಾರಗಳನ್ನು ಜನರಿಗೆ ತಿಳಿಸುತ್ತಿದ್ದೆ ಎಂದು ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ನಮ್ಮ ನಡುವೆ ಹೇರಿಕೆ ಸಂಸ್ಕೃತಿಯ ವಿರುದ್ಧವಾದ ಕಥಾಹಂದರದ ಈ ಸಿನಿಮಾ ಈಗಾಗಲೇ ಲಂಡನ್ ಮತ್ತು ಲಾಸ್ ಎಂಜಲೀಸ್‌ನ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಉತ್ತಮ ಚಲನಚಿತ್ರ ,ಉತ್ತಮ ನಿರ್ದೇಶನದ ಚಲನಚಿತ್ರಗಳ ಸಾಲಿನಲ್ಲಿ ಆಯ್ಕೆಗೊಂಡಿದೆ ಕೆನಡಾದ ಫಿಲಂಫೆಸ್ಟಿವಲ್‌ಗೂ ಆಯ್ಕೆಯಾಗಿದೆ.ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮ ರಾಜ್ಯದ ಬೆಂಗಳೂರು ಫಿಲಂ ಫೆಸ್ಟಿವೆಲ್‌ಗೆ ಆಯ್ಕೆಯಾಗಿಲ್ಲ ಎಂದು ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ಈ ಕಥೆ 1980ರ ಕಥೆಯಾಗಿರುವ ಕಾರಣ ಅದನ್ನು ಅದೇ ಪರಿಸರದಲ್ಲಿ ನೈಜತೆಯೊಂದಿಗೆ ದೊರೆ ಭಗವಾನ್‌ರ ಕಾಲದ ಸಿನಿಮಾ ತಾಂತ್ರಿಕತೆಯೊಂದಿಗೆ ಚಿತ್ರೀಕರಣ ನಡೆಸಲಾಗಿದೆ.ಒಂದು ತಿಂಗಳ ಕಾಲ ಶೂಟಿಂಗ್ ಪೂರ್ಣಗೊಂಡಿದೆ. ಫೆ.23ರಂದು ಆಡಿಯೋ ರಿಲೀಸ್ ಆಗಲಿದೆ.ಚಲನಚಿತ್ರದಲ್ಲಿ ಶುೃತಿ,ಸುಚೇಂದ್ರ ಪ್ರಸಾದ್, ಅನಿರುದ್ಧ, ಶಂಕರ ಆರ್ಯನ್,ಸಹನಾ,ಅರುಂದತಿ ಜಟ್ಕರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.ಚಿತ್ರದ ಕಥೆ,ಸಾಹಿತ್ಯ,ಸಂಗೀತ ಮತ್ತು ನಿರ್ದೇಶನದ ಹೊಣೆಯನ್ನು ನಾನು ಹೊತ್ತಿದ್ದೇನೆ ಎಂದು ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

  ಯೊಗೇಶ್ ಮಾಸ್ಟರ್ 175 ಕನ್ನಡ ಕೃತಿಗಳನ್ನು ರಚಿಸಿದ್ದು ರಂಗಭೂಮಿಯ ಮೂಲಕ ಸಕ್ರೀಯರಾಗಿದ್ದವರು ಪ್ರಸಕ್ತ ಕೌಟುಂಬಿಕ ಮೌಲ್ಯದ ಚಲನಚಿತ್ರವನ್ನು ಜನರಿಗೆ ನೀಡುತ್ತಿದ್ದಾರೆ ಎಂದು ಯೋಗೀಶ್ ಮಾಸ್ಟರ್ ಬಗ್ಗೆ ಪರಿಚಯಿಸಿದ ಉಮ್ಮರ್ ಯು.ಎಚ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News