ಜಮ್ಮು ಕಾಶ್ಮೀರ: 50 ದಿನದಲ್ಲಿ 22 ಉಗ್ರರ ಹತ್ಯೆ ; ಹುತಾತ್ಮರಾದ 26 ಯೋಧರು

Update: 2017-02-19 15:25 GMT

ಶ್ರೀನಗರ,ಫೆ.19: ಈ ವರ್ಷದ (2017) ಆರಂಭದ 50 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯಲ್ಲಿ 22 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆಯಲ್ಲಿ 26 ಯೋಧರು ಹುತಾತ್ಮರಾಗಿದ್ದಾರೆ.

 ಇವರಲ್ಲಿ ಓರ್ವ ಅಧಿಕಾರಿಯೂ ಸೇರಿದಂತೆ 20 ಯೋಧರು ಹಿಮಪಾತಕ್ಕೆ ಬಲಿಯಾಗಿದ್ದರೆ ಆರು ಯೋಧರು ಭಯೋತ್ಪಾದಕರ ನಿಗ್ರಹ ಕಾಯಾಚರ್ರಣೆ ವೇಳೆ ಹುತಾತ್ಮರಾಗಿದ್ದಾರೆ.

 ಫೆ.12ರಂದು ಕುಲ್‌ಗಾಂವ್ ಎಂಬಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಇಬ್ಬರು ಯೋಧರು ಹುತಾತ್ಮರಾಗಿದ್ದರು. ಕಾರ್ಯಾಚರಣೆಯ ವೇಳೆ ಓರ್ವ ನಾಗರಿಕ ಮೃತಪಟ್ಟಿದ್ದರೆ, ಕಾರ್ಯಾಚರಣೆ ಮುಗಿದ ಬಳಿಕ ನಡೆದ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ವುತ್ತೊಬ್ಬ ನಾಗರಿಕ ಮೃತಪಟ್ಟಿದ್ದ.

ಫೆ.14ರಂದು ಕುಪ್ವಾರಾ ಜಿಲ್ಲೆಯ ಹಂದ್ವಾರಾ ಎಂಬಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಆದರೆ ಸೇನೆಯ ಮೇಜರ್ ಓರ್ವರು ಹುತಾತ್ಮರಾಗಿದ್ದರು. ಅದೇ ದಿನ ಬಂಡಿಪೊರ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಆದರೆ ಮೂವರು ಯೋಧರು ಹುತಾತ್ಮರಾಗಿದ್ದರು.

 ಕಳೆದ ವರ್ಷ ಪ್ರತ್ಯೇಕತಾವಾದಿಗಳ ಮುಖಂಡ ಬರ್ಹಾನ್ ವಾನಿ ಹತ್ಯೆಯಾದ ಬಳಿಕ, ಸುಮಾರು 100ಕ್ಕೂ ಹೆಚ್ಚು ಮಂದಿ ಯುವಕರು ಉಗ್ರಗಾಮಿಗಳ ಗುಂಪಿಗೆ ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ವರ್ಷದ ಜನವರಿಯಿಂದ ಸುಮಾರು 50 ಕಾರ್ಯಾಚರಣೆ ನಡೆಸಲಾಗಿದ್ದು ಇದರಲ್ಲಿ 16 ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಅಥವಾ ಬಂಧಿಸಲಾಗಿದೆ. ಅಲ್ಲದೆ ರಾಜ್ಯದ ಹಲವೆಡೆ, ವಿಶೇಷವಾಗಿ ಉತ್ತರ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದ ಭಯೋತ್ಪಾದಕರ ಮಾಹಿತಿದಾರರ (ಓವರ್‌ಗ್ರೌಂಡ್ ವರ್ಕರ್ಸ್-ಒಜಿಡಬ್ಲೂ) ಜಾಲವನ್ನು ಬೇಧಿಸಲು ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು. ಈ ಮಾಹಿತಿದಾರರು ಗುರಿಯನ್ನು ಗುರುತಿಸುವುದು, ಭಯೋತ್ಪಾದಕರಿಗೆ ಅಡಗುದಾಣ ಮತ್ತು ಆಹಾರ ಪೂರೈಸುವುು ಮುಂತಾದ ಕಾರ್ಯ ಮಾಡುತ್ತಾರೆ.

   ಭದ್ರತಾ ಪಡೆಗಳ ಆದ್ಯತೆ ಪಟ್ಟಿಯಲ್ಲಿ ಇವರ ಉಲೇಖವಿರಲಿಲ್ಲ. ಆದರೆ ಇವರನ್ನು ಮಟ್ಟಹಾಕಿದ್ದು ಭಯೋತ್ಪಾದಕರ, ಅದರಲ್ಲೂ ವಿಶೇಷವಾಗಿ ವಿದೇಶಿ ಭಯೋತ್ಪಾದಕರ ಶಕ್ತಿ ಕುಂದಿಸಿದಂತಾಗಿದೆ ಎಂದು ಉತ್ತರ ಕಾಶ್ಮೀರದ ೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News