×
Ad

'ಜಿನ್ನ್ ಚಿಕಿತ್ಸೆ' ಹೆಸರಲ್ಲಿ ಯುವತಿಗೆ ಗಂಭೀರ ಸುಟ್ಟ ಗಾಯ : ಮಹಿಳೆ ಸೆರೆ

Update: 2017-02-21 13:36 IST

ನಾದಾಪುರಂ(ಕಲ್ಲಿಕೋಟೆ), ಫೆ. 21: ಇಲ್ಲಿನ ಪುರಮೇರಿ ಹೊಮಿಯೋಮುಕುನ್ನ್‌ಗೆ ಸಮೀಪದ ಮಾಳುವುಕ್ಕ ಟ್ರಾಸ್‌ಫಾರ್ಮರ್ ಪರಿಸರದ ಮನೆಯೊಂದರಲ್ಲಿ ನಡೆಸಲಾದ ಜಿನ್ನ್ ಚಿಕಿತ್ಸೆ ಹೆಸರಲ್ಲಿ ಯುವತಿಗೆ ಗಂಭೀರ ಸುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದೆ.

ಕಲ್ಲಿಕೋಟೆ ಹೊಸ ಕಡವಿಲ್ ಲೈಲಾಮಂಝಿಲ್‌ನ ಶಮೀನಾರ(29) ದೇಹವಿಡೀ ಸುಟ್ಟಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿ ‘ಜಿನ್ನ್ ಚಿಕಿತ್ಸೆ’ ನೀಡಿದ ನಜ್ಮಾ (35) ಎಂಬವಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಶನಿವಾರ ಸಂಜೆ ಪುರಮೇರಿ ಚುಂಗ್ಯ ಕೊಯಿಲಾತ್ ನಜ್ಮಾ ವಾಸವಿದ್ದ ಬಾಡಿಗೆ ಮನೆಗೆ ಚಿಕಿತ್ಸೆ ಕಾರ್ಯ ನಡೆದಿತ್ತು. ವಿವಾಹ ವಿಚ್ಛೇದಿತೆ ಶಮೀನಾರಿಗೆ ಮರುಮದುವೆ ಸಾಧ್ಯವಾಗಿಲ್ಲ ಎಂದು ಮನೆಯವರು ಶಮೀನಾರನ್ನು ನಜ್ಮಾಳ ಬಾಡಿಗೆ ಮನೆಗೆ ಕರೆದುಕೊಂಡು ಬಂದಿದ್ದರು. ನಜ್ಮಾ ಒಂದು ಲೀಟರ್ ಪೆಟ್ರೋಲ್ ತರಲು ತಿಳಿಸಿದ್ದಳು. ಮನೆಯೊಳಗಿನ ಇಕ್ಕಾಟ್ಟಾದ ಕತ್ತಲಿನ ಕೋಣೆಯಲ್ಲಿ ಶಮೀನಾರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಅವರ ಮುಂದೆ ಮಣ್ಣಿನ ಪಾತ್ರೆಗೆ ಪೆಟ್ರೋಲು ಸರಿದು ಬೆಂಕಿ ಕೊಡಲಾಗಿತ್ತು.

  ಮಣ್ಣಿನ ಪಾತ್ರೆಯಿಂದ ಬೆಂಕಿ ಹೊರಗೆ ಬಂದು ಅಲ್ಲಿದ್ದ ಪೆಟ್ರೋಲ್ ಬಾಟ್ಲಿಗೆ ಹಿಡಿದಿತ್ತು. ನಂತರ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದ ಶಮೀನಾರ ಉಡುಪಿಗೂ ತಗುಲಿತ್ತು. ಕೂಡಲೇ ಶಮೀನಾರನ್ನು ಸ್ನಾನದಕೋಣೆಗೆ ಕರೆದೊಯ್ದು ಶರೀರಕ್ಕೆ ಅಂಟಿಕೊಂಡ ಬಟ್ಟೆಯನ್ನು ತೆಗೆದು ಅಲ್ಲಿದ್ದವರು ಕೂಡಲೇ ನಾದಾಪುರಂ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ನಜ್ಮಾ ಕುಟ್ಯಾಡಿ, ದೇವರ್‌ಕೋವಿಲ್. ಮರುತಂಗರ ಮುಂತಾದ ಹಲವು ಕಡೆ ‘ಜಿನ್ನ್ ಚಿಕಿತ್ಸೆ’ ನಡೆಸುತ್ತಿದ್ದಳು. ಊರಿನವರು ಪ್ರತಿಭಟಿಸಿ ಆಕೆಯನ್ನು ಅಲ್ಲಿಂದೆಲ್ಲ ಓಡಿಸಿದ್ದರು. ಶಮೀನಾರ ಸಂಬಂಧಿಕರು ನೀಡಿದ ದೂರಿನ ಪ್ರಕಾರ ನಜ್ಮಾಳವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News