×
Ad

ಜೆಎನ್‌ಯು ವಿದ್ಯಾರ್ಥಿಗಳಿಗೆ ದಿಲ್ಲಿಯ ರಮಜಸ್ ಕಾಲೇಜಿನ ಆಹ್ವಾನ ರದ್ದು

Update: 2017-02-21 19:23 IST

ಹೊಸದಿಲ್ಲಿ,ಫೆ.21: ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ಅವರ ಭಾಗವಹಿಸುವಿಕೆಯನ್ನು ದಿಲ್ಲಿ ವಿವಿ ವಿದ್ಯಾರ್ಥಿ ಸಂಘ ಮತ್ತು ಎಬಿವಿಪಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ದಿಲ್ಲಿ ವಿವಿಯ ರಮಜಸ್ ಕಾಲೇಜು ಮಂಗಳವಾರ ಅವರಿಬ್ಬರಿಗೆ ತನ್ನ ಆಹ್ವಾನವನ್ನು ಹಿಂದೆಗೆದುಕೊಳ್ಳುವ ಜೊತೆಗೆ ತನ್ನ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣವನ್ನು ರದ್ದುಗೊಳಿಸಿತು.

ರಮಜಸ್ ಕಾಲೇಜಿನ ಸಾಹಿತ್ಯ ಸಂಘವು ಏರ್ಪಡಿಸಿದ್ದ ‘ಪ್ರತಿಭಟನೆಯ ಸಂಸ್ಕೃತಿಗಳು ’ ವಿಚಾರ ಸಂಕಿರಣದಲ್ಲಿ ಮಧ್ಯಾಹ್ನ ನಡೆಯಲಿದ್ದ ‘ಆದಿವಾಸಿ ಪ್ರದೇಶಗಳಲ್ಲಿ ಯುದ್ಧ ’ ಕುರಿತು ಖಾಲಿದ್ ಮಾತನಾಡಲಿದ್ದರು.

ಆದರೆ ಅವರು ರಮಜಸ್ ಕಾಲೇಜು ತಲುಪುವ ಮುನ್ನವೇ ಅಲ್ಲಿ ಪ್ರತ್ಯಕ್ಷರಾಗಿದ್ದ ದಿಲ್ಲಿ ವಿವಿ ವಿದ್ಯಾರ್ಥಿ ಸಂಘ ಮತ್ತು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ವ್ಯತ್ಯಯವನ್ನುಂಟು ಮಾಡಿದರು. ಪ್ರಾಂಶುಪಾಲ ರಾಜೇಂದ್ರ ಪ್ರಸಾದ್ ಅವರನ್ನೂ ಭೇಟಿಯಾಗಿ ಖಾಲಿದ್ ಪಾಲ್ಗೊಳ್ಳುವಿಕೆಯನ್ನು ಆಕ್ಷೇಪಿಸಿದರು.

ವಿದ್ಯಾರ್ಥಿಗಳು ಆಕ್ಷೇಪವೆತ್ತಿದ ಬಳಿಕ ನಾವು ಖಾಲಿದ್ ಮತ್ತು ಶೆಹ್ಲಾರಿಗೆ ನೀಡಿದ್ದ ಆಹ್ವಾನವನ್ನು ರದ್ದುಗೊಳಿಸಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗಬಹುದೆಂಬ ಆತಂಕದಿಂದ ಪೊಲೀಸರೂ ಇದೇ ಸಲಹೆ ನೀಡಿದ್ದರು ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News