ಲೈಸನ್ಸ್ ಪಡೆಯಲು ಶಿರವಸ್ತ್ರ ಧರಿಸಿದ ಫೋಟೊಕ್ಕೆ ನಿಷೇಧವಿಲ್ಲ: ಕೇರಳ ಟ್ರಾನ್ಸ್‌ಪೋರ್ಟ್ ಕಮಿಶನರೇಟ್

Update: 2017-02-24 08:52 GMT

ಮಲಪ್ಪುರಂ,ಫೆ. 24: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಶಿರವಸ್ತ್ರ ಧರಿಸಿದ ಫೋಟೊ ನಿಷೇಧಿಸಲಾಗಿಲ್ಲ ಎಂದು ರಾಜ್ಯ ಟ್ರಾನ್ಸ್‌ಪೋಟ್ ಕಮಿಶನರೇಟ್ ತಿಳಿಸಿದೆ. ಎರ್ನಾಕುಲಂ ಪಾನಾಯಿಕ್ಕುಳಂನ ಪಿ.ಎಸ್, ಸುಫೈರಾ ನೀಡಿದ ಮಾಹಿತಿ ಹಕ್ಕು ಅರ್ಜಿಗೆ ಕಮಿಶನರೇಟ್ ಈ ರೀತಿ ಉತ್ತರಿಸಿದೆ. ಕಿವಿ ಹೊರಗೆ ಕಾಣುವುದಿಲ್ಲ ಎಂದು ಕಾರಣ ಹೇಳಿ, ಶಿರವಸ್ತ್ರ ಧರಿಸಿದ ಫೋಟೊದೊಂದಿಗೆ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಹಾಕಿದಾಗ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದರು. ಆದರೆ ಇಂತಹ ಯಾವುದೇ ಸೂಚನೆ ಹೊರಡಿಸಲಾಗಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿತ್ತು.

ಮೋಟಾರು ವಾಹನ ಕಾನೂನುಗಳಲ್ಲಿ, ನಿಯಮಗಳಲ್ಲಿ ಲೈಸೆನ್ಸ್ ಅರ್ಜಿ ಹಾಕುವವರ ಶಿರವಸ್ತ್ರ ಧರಿಸಿದ ಫೋಟೊವನ್ನು ಪರಿಗಣಿಸುವುದಿಲ್ಲ ಎಂದು ಹೇಳುವುದಿಲ್ಲ. ಇದಕ್ಕೆ ವಿರುದ್ಧ ವರ್ತಿಸಿದರೆ ಅದರ ಜವಾಬ್ದಾರರು ಅಧಿಕಾರಿಗಳೇ ಆಗಿದ್ದಾರೆ ಎಂದು ಕಮಿಶನರೇಟ್ ಸ್ಪಷ್ಟಪಡಿಸಿದೆ. ಪಾಸ್‌ಪೋರ್ಟ್ ಅರ್ಜಿಗೆ ಅಂಟಿಸುವ ಫೋಟೊಗಳಿಗೆ ಸ್ಪಷ್ಟವಾದ ನಿಯಮಗಳನ್ನು ಕೇಂದ್ರ ಸರಕಾರ ಸೂಚಿಸಿದೆ.

ವಿಶ್ವಾಸಕ್ಕೆ ಸಂಬಂಧಿಸಿದ ಕಾರಣದಲ್ಲಿ ಶಿರವಸ್ತ್ರ ಧರಿಸಿ ತೆಗೆದ ಫೋಟೊಗಳನ್ನು ಪಾಸ್‌ಪೋರ್ಟ್ ಅರ್ಜಿಯಲ್ಲಿ ಕೂಡಾ ಸ್ವೀಕರಿಸಬಹುದೆಂದು ತಿಳಿಸಲಾಗಿದೆ. ಆದರೆ ಸಾರಿಗೆ ಇಲಾಖೆ ಇಂತಹ ಯಾವುದೇ ನಿಯಮವನ್ನು ಹೊರಡಿಸಿಲ್ಲ. ಆದರೆ, ಲೈಸನ್ಸ್‌ಗೆ ಸಲ್ಲಿಸುವ ಅರ್ಜಿಯ ಮುಂದಿನ ಕ್ರಮಗಳು ಕಷ್ಟ ಆಗುತ್ತದೆ ಎಂದು ಅಧಿಕಾರಿಗಳ ವರ್ತನೆಯನ್ನು ಹೆಚ್ಚಿನವರು ಸಹಿಸಿಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News