ಶಾರುಖ್ ಮೊದಲ ಹೆಜ್ಜೆಯ ಮೂಲಕ ದೂರದರ್ಶನ ಸರ್ಕಸ್

Update: 2017-02-24 11:46 GMT

ಇದನ್ನು ಆಕಸ್ಮಿಕ ಶೋಧ ಎನ್ನಿ ಅಥವಾ ಸರಕಾರಿ ಪ್ರಸಾರ ಸಂಸ್ಥೆಯ ಮಾರುಕಟ್ಟೆ ತಂತ್ರ ಎಂದಾದರೂ ಕರೆಯಬಹುದು. 1989ರ ‘ಸರ್ಕಸ್’ ಜನಪ್ರಿಯ ಟೆಲಿವಿಷನ್ ಶೋ ಸರಣಿಯನ್ನು ಪ್ರತಿ ರವಿವಾರ ಪ್ರಸಾರ ಮಾಡುವ ನಿರ್ಧಾರಕ್ಕೆ ಇದಕ್ಕಿಂತ ಸೂಕ್ತ ಸಮಯ ಸಿಗಲಾರದು.

ಕನಿಷ್ಠಪಕ್ಷ ಆ ದಿನಗಳಲ್ಲಿ ‘ಪೌಜಿ’ ಚಿತ್ರದ ರೂಕಿ ಆರ್ಮಿ ಕಮಾಂಡೊ ಆಗಿ ಹಾಗೂ ಸರ್ಕಸ್‌ನಲ್ಲಿ ಯುವ ಸರ್ಕಸ್ ಚಕ್ರವರ್ತಿಯಾಗಿ ಭಾರತೀಯರ ಮನೆ- ಮನಗಳನ್ನು ತಲುಪಿರುವ ಈ ನಾಯಕ ನಟನ ಪಾಲಿಗಾದರೂ ಇದು ಸಕಾಲಿಕ.

ಸರ್ಕಸ್ ಸರಣಿಯಲ್ಲಿ ಖಾನ್ ಮಲೆಯಾಳಿ ಶೇಖರನ್ ಪಾತ್ರ ನಿರ್ವಹಿಸಿದ್ದಾರೆ. ಅಝೀಝ್ ಮಿರ್ಜಾ ಹಾಗೂ ಕುಂದನ್ ಶಾ ಇದನ್ನು ನಿರ್ದೇಶಿಸಿದ್ದಾರೆ. ಈ ದಿಲ್ಲಿ ನಟ ಖಂಡಿತವಾಗಿಯೂ ಸಾಂಸ್ಕೃತಿಕವಾಗಿ ಈ ಪಾತ್ರಕ್ಕೆ ಸೂಕ್ತರಲ್ಲದಿದ್ದರೂ, ಪರದೆ ಮೇಲಿನ ಅಸ್ತಿತ್ವದ, ಅದ್ಭುತ ಸಾಮರ್ಥ್ಯ, ಅಸಾಧ್ಯ ಯೌವನ ಹಾಗೂ ಪ್ರತೀ ಪ್ರೇಮ್‌ನಲ್ಲಿ ಅಸ್ತಿತ್ವ ಪ್ರದರ್ಶಿಸುವ ಸಾಮರ್ಥ್ಯದ ಮೂಲಕ ಸೂಕ್ತವಾಗಿ ರೂಪುಗೊಂಡಿದ್ದಾರೆ.

‘ರಾಮಾಯಣ’ದಲ್ಲಿನ ಅರುಣ್ ಗಾವ್ಳಿ ಅಥವಾ ವಿಭಜನೆ ಶಖೆಯ ‘ಬುನಿಯಾದ್’ ಧಾರಾವಾಹಿಯ ವೃದ್ಧ ಅಲೋಕ್‌ನಾಥ್ ಅವರಂತೆ ಈ ಎಲ್ಲ ಗುಣಗಳು ಖಾನ್ ಅವರನ್ನು ಯುವ ಪ್ರೇಕ್ಷಕ ಸಮೂಹದಲ್ಲಿ ಪ್ರೀತಿಪಾತ್ರರನ್ನಾಗಿಮಾಡಿದೆ.

ವರ್ಷಗಳ ಬಳಿಕ, ಖಾನ್ ಅವರ ಕಟ್ಟುಮಸ್ತಾದ ದೇಹ, ಬಬೂಲ್ ಹಾಗೂ ರೋಸ್‌ಬಾತ್ ಮೂಲಕ ಸ್ನಾನದ ಸಾಬೂನ್ ಬ್ರಾಂಡ್ ಪ್ರಚಾರದ ಮೂಲಕ ಬೆಳಕಿಗೆ ಬಂತು. ‘ಸರ್ಕಸ್’ನ ಮೊದಲ ಕಂತುಗಳಲ್ಲಿ ಅವರು ತಳಮಟ್ಟಕ್ಕೆ ಇಳಿದಿದ್ದಾರೆ. ಟೆಂಟ್‌ನಿಂದ ಹೊರಬಂದು ಗೂಡಿನಲ್ಲಿರುವ ಪ್ರಾಣಿಗಳ ಜತೆ ತೆರೆದ ಪ್ರದೇಶದಲ್ಲೇ ಸ್ನಾನ ಮಾಡಿ ಬಟ್ಟೆ ಬದಲಿಸುವ ಮೂಲಕ ಕಂಪೆನಿಯ ಬಗ್ಗೆ ಹದಿಹರೆಯದವರು ಕಿಸಿಕಿಸಿ ನಗುವಂತೆ ಮಾಡುತ್ತಾರೆ.

ಅವರ ಕಣ್ಣಿನ ಮೇಲೆ ಸಾಬೂನು ನೊರೆ ಆವರಿಸಿದ್ದರಿಂದ ಬಕೆಟ್ ನೀರಿಗೂ ಪರದಾಡುತ್ತಾರೆ. ಕೊನೆಗೆ ಸ್ನೇಹಿತ ನೆರವಿಗೆ ಬರುತ್ತಾನೆ. ಮುಂದಿನ ಕಂತುಗಳಲ್ಲಿ ಖಾನ್, ಸಂಪ್ರದಾಯ ಮುರಿಯುವ ಇಂಗಿತ ಪ್ರದರ್ಶಿಸಿದ್ದಾರೆ. ಇದು ಅವರ ಮುಂದಿನ ಯಶಸ್ವಿ ಚಿತ್ರಗಳಲ್ಲೂ ಕಂಡುಬರುತ್ತದೆ.

‘ಪೌಜಿ’ ಹಾಗೂ ‘ಸರ್ಕಸ್’ಗಳಲ್ಲಿ ಕಂಡುಬಂದ ತಳಮಟ್ಟದ ಹಾಗೂ ತೀರಾ ಸೌಮ್ಯ ಸ್ವಭಾವದ ಶಾರುಖ್ ಖಾನ್ ಗುಣಗಳು 2016ರ ‘ಫ್ಯಾನ್’ ಹಾಗೂ ‘ಡಿಯರ್ ಜಿಂದಗಿ’ ಚಿತ್ರಗಳಲ್ಲೂ ಕಂಡುಬರುತ್ತವೆ. ಈ ಕಾರಣಕ್ಕಾಗಿಯೇ ಅವರ ಅಭಿಮಾನಿ ಸಮೂಹಕ್ಕೆ ಅದು ಹೆಚ್ಚು ಪ್ರಸ್ತುತ ಎನಿಸಿದೆ. ಖಾನ್, ಅಝೀಝ್ ಮಿರ್ಜಾ ಮತ್ತು ಕುಂದನ್ ಶಾ ನಡುವಿನ ಸೃಜನಶೀಲ ಸಹಭಾಗಿತ್ವಕ್ಕೂ ಸರ್ಕಸ್ ಮಹತ್ವದ ಬೀಜ ಬಿತ್ತಿತ್ತು.

‘ರಾಜು ಬನ್‌ಗಯಾ ಜಂಟಲ್‌ಮನ್’ (1992), ‘ಯಸ್ ಬಾಸ್’ (1997), ‘ಪಿರ್ ಭಿ ಹೈ ಹಿಂದೂಸ್ತಾನಿ’ (2000) ಹಾಗೂ ‘ಚಲ್ತೆ ಚಲ್ತೆ’ (2003) ಚಿತ್ರಗಳನ್ನು ಮಿರ್ಜಾ ನಿರ್ದೇಶಿಸಿದ್ದರೆ, ‘ಕಭಿ ಹಾನ್ ಕಭಿ ನಾ’ (1994) ಚಿತ್ರದಲ್ಲಿ ಖಾನ್ ತಮ್ಮ ಅತ್ಯುತ್ತಮ ನಟನಾ ಕೌಶಲ ಹೊರಹೊಮ್ಮಿಸುವಲ್ಲಿ ಶಾ ನೆರವಾಗಿದ್ದಾರೆ.

ಜನಪ್ರಿಯ ಸಿದ್ಧಾಂತ, ಸಾಹಿತ್ಯಕ ಪ್ರಭಾವ, ಚಾಪ್ಲಿಯನ್ ವಿಶ್ವದೃಷ್ಟಿ ಹಾಗೂ ಗಂಭೀರ ಕಲೆಯನ್ನು ವೈಭವೀಕೃತ ಚೌಕಟ್ಟಿನಲ್ಲಿ ನೀಡುವ ಸಾಮರ್ಥ್ಯದಿಂದ ಇಬ್ಬರೂ ಚಿತ್ರ ನಿರ್ಮಾಪಕರು ಜನಪ್ರಿಯರಾಗಿದ್ದಾರೆ. ದೂರದರ್ಶನದೊಂದಿಗೆ ಆರಂಭವಾಗಿರುವ ಈ ಸಹಯೋಗ, ಖಾನ್, ಮುಗುಳ್ನಗೆ ಹಾಗೂ ಮುಕ್ತಹಸ್ತದಿಂದ ವಿದೇಶಿ ಬೀದಿಗಳಲ್ಲಿ ಹೆಜ್ಜೆ ಹಾಕುವ ಮೂಲಕ ಕೆಲ ವರ್ಷಗಳ ಬಳಿಕ ಬಾಕ್ಸ್ ಆಫೀಸ್‌ಗೂ ಲಗ್ಗೆ ಇಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News