ರಾಜಧಾನಿ ಅಮರಾವತಿ

Update: 2017-02-24 12:29 GMT

ತಮ್ಮ ಕನ್ನಡ ಪರ ಕಾಳಜಿ, ಸಮಾಜಮುಖಿ ಹೋರಾಟ ಮತ್ತು ರಂಗಭೂಮಿಯ ಒಲವಿನಿಂದ ಗುರುತಿಸಿಕೊಂಡವರು ಗಿರಿರಾಜ್ ಬಿ.ಎಂ.

""Every Writer is a fighter'' ಅನ್ನುತ್ತಾ ಗಾಂಧಿನಗರಕ್ಕೆ ಕಾಲಿಟ್ಟವರು ಗಿರಿರಾಜ್. ರಾಜಧಾನಿಯ ತುಂಬಾ ‘‘ಅಮರಾವತಿಯ’’ ಆಲಾಪ! ಇದು ಬರೀ ಸಿನೆಮಾದ ಹೆಸರಲ್ಲ ಒಂದು ವರ್ಗದ ಕೂಗು ಎಂದರೆ ತಪ್ಪಾಗಲಾರದು! ದೊಡ್ಡ ದೊಡ್ಡ ಕಾರು, ಐಷಾರಾಮಿ ಬಂಗಲೆ, ಆಳು ಕಾಳು ಇಂಥವರನ್ನೇ ನಾಯಕ ಅಂತ ಪರದೆ ಮೇಲೆ ತೋರಿಸೋ ಬದಲು ನಮ್ಮ ನಿಮ್ಮೆಲ್ಲರ ನಡುವೆ ಹಾದು ಹೋಗುವವರ ಕಥೆ ಹೇಳಿದ್ದಾರೆ ಅಮರಾವತಿಯಲ್ಲಿ. ಈ ಸಮಾಜಮುಖಿ ನಿರ್ದೇಶಕ, ಕನ್ನಡ ಪರ ಹೋರಾಟಗಾರ ‘‘ನಮ್ ಸಿನೆಮಾ’’ ಜಾಲ ತಾಣಕ್ಕೆ ಕೊಟ್ಟ ಸಣ್ಣ ಸಂದರ್ಶನ ಇಲ್ಲಿದೆ...

ಯಾಕೆ ಅಮರಾವತಿ??

So - ನಾನು ಸುಮಾರು ಸಲ ಹೇಳಿದೀನಿ ಈಗಲೂ ಹೇಳ್ತೀನಿ ‘‘ಕಲೆ’’ ಅನ್ನೋದು ಧ್ವನಿ ಇಲ್ಲದವರ ಪಾಲಿನ ಧ್ವನಿ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನದ ಪ್ರತಿರೂಪ ‘‘ಅಮರಾವತಿ.’’ ನಮ್ಮ ಸುತ್ತಲಿನ ಸಮಾಜದಲ್ಲಿ ನಾವು ಎಚ್ಚರವಿದ್ದಷ್ಟು ನಮಗೆ ವಿಷಯಗಳು ತಲಪುತ್ತಾ ಇರುತ್ತೆ ಅಥವಾ ತೊಂದರೆ ಮಾಡ್ತಾ ಇರುತ್ತೆ. ಹಾಗಂತ ಅದರ ಕಡೆ ಜಾಣಕುರುಡರಾದಷ್ಟು ನಮ್ಮ್ಮೆಳಗಿನ ವ್ಯಕ್ತಿತ್ವವನ್ನು ನಾವು ಹಾಳು ಮಾಡಿಕೊಳ್ಳುತ್ತಾ ಹೋಗ್ತೀವಿ. ಯಶವಂತ ಚಿತ್ತಾಲರು ತುಂಬಾ ಚೆನ್ನಾಗಿ ಹೇಳಿದಾರೆ..

‘‘ನಾವು ಮನುಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗೋಕೆ ಹುಟ್ಟಿದೀವಿ!’’ ಮನುಷ್ಯರಾಗುವ ಪ್ರಕ್ರಿಯೆಯಲ್ಲಿ ನಾವು ಮಾಡುವ ಕೆಲಸಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಎಷ್ಟು ಸಹಾಯಕವಾಗಿದೆ? ಮತ್ತು ಆ ಕೆಲಸಗಳನ್ನ ಮಾಡೋದರಿಂದ ಇನ್ನೊಬ್ಬರ ನೋವನ್ನ ಕಡಿಮೆ ಮಾಡಲಿಕ್ಕೊ ಅಥವಾ ಅವರ ಬದುಕನ್ನ ಹಸನಾಗಿಸುವುದಕ್ಕೆ ಸಾಧ್ಯವೋ? ಆ ಮೂಲಕ ನಮ್ಮ ಬದುಕನ್ನ ಹಸನಾಗಿಸುವುದಕ್ಕೆ ಸಾಧ್ಯವೋ? ಈ ಎಲ್ಲ ಪ್ರಶ್ನೆಗಳನ್ನ ಪ್ರತಿಯೊಬ್ಬರೂ, ಪ್ರತೀ ಕ್ಷೇತ್ರದಲ್ಲಿರುವಂತಹ ವ್ಯಕ್ತಿಗಳು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂಬ ಒಳ ಒತ್ತಾಯದಿಂದ ‘‘ಅಮರಾವತಿ’’ ಮೂಡಿ ಬಂದಿದೆ.

ಅಮರಾವತಿ ಬಗ್ಗೆ ಯೋಚನೆ ಬಂದಿದ್ದು ಹೇಗೆ? ಮತ್ತು ಮೊದಲ ಬಾರಿ ಇದರ ಬಗ್ಗೆ ನಿಮ್ಮ ವಲಯದಲ್ಲಿ ಬಂದ ಪ್ರತಿಕ್ರಿಯೆ ಏನು?

Dump The so called Middle class and Upper Middle Classthey were excited. My core team stood behind me. But 2015- 2012ರಲ್ಲಿ ಜಟ್ಟ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದ್ವೀ. ಅದಾದ ಎರಡು ತಿಂಗಳಿಗೆ ಪೌರಕಾರ್ಮಿಕರ ಮುಷ್ಕರ ಶುರುವಾಯ್ತು.

ಅವರು ಬರೀ ಮೂರು ದಿವಸ ಬೆಂಗಳೂರಿನಲ್ಲಿ ಕಸ ಸ್ವಚ್ಛ ಮಾಡಿಲ್ಲ. ಆ ಮೂರು ದಿವಸದ ಕಸದ ಸಮಸ್ಯೆ ಏನಿದೆ ಅಂದರೆ ಅದರ ಕೊರತೆಯನ್ನು ಈವತ್ತಿನ ತನಕ ನಮಗೆ ನಿವಾರಿಸೋಕೆ ಆಗ್ತಿಲ್ಲ. ಇತ್ತೀಚಿನ ವಿದ್ಯಮಾನವೇನೆಂದರೆ ಬೆಂಗಳೂರಿನ ಕಸ ತಕ್ಕೊಂಡು ಹೋಗಿ ಕೋಲಾರದಲ್ಲಿ ಮಾಡೋದಂತೆ! ಇಷ್ಟೆಲ್ಲ ಸಮಸ್ಯೆ ಆಗಲಿಕ್ಕೆ ಕಾರಣ ಒಂದು ನಗರವನ್ನ ಸ್ವಚ್ಛವಾಗಿ ಕಾರ್ಯಪ್ರವೃತ್ತಿಗೊಳಿಸಲಿಕ್ಕೆ ಯಾವ ಕಾರ್ಮಿಕ ವರ್ಗ ದುಡೀಬೇಕೋ ಆ ವರ್ಗದ ಜನರನ್ನ ವ್ಯವಸ್ಥೆಯಾಗಲೀ, ವ್ಯಕ್ತಿಗಳಾಗಲಿ ಒಲವು, ಸಂಯಮ ತೋರಿಸದೆ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿರೋದು.

ನೆನಪಿರಲಿ, ಅವರು ಮೂರೇ ದಿವಸ ಕೆಲಸ ಮಾಡಿಲ್ಲದೆ ಇದ್ದಾಗ ಇಷ್ಟೆಲ್ಲ ಅನಾಹುತ ಆಯ್ತು, ಇಡೀ ನಗರ ಸಾಂಕ್ರಾಮಿಕತೆಯ ತುತ್ತ ತುದಿಗೆ ಬಂದು ಬಿಟ್ಟಿತ್ತು. ಇನ್ನೊಂದೆರಡು ದಿನ ಹೀಗೇ ಇದ್ದಿದ್ರೆ ಇನೇನು ಅನಾಹುತಗಳಾಗೋದು ಗೊತ್ತಿಲ್ಲ! ಈಸಂದರ್ಭದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪೌರಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ಮಾಡ್ತಾ ಇದ್ರು. ನಾನು ಅಲ್ಲಿ ಹೋದಾಗ ಒಂದು ಹಿರಿಯ ಜೀವ ‘‘ಲಕ್ಷ್ಮವ್ವ’’ ಹೇಳಿದ್ದು ಕೇಳಿಸಿಕೊಂಡೆ ‘‘ನಾವು ಕಸ ತೆಗೆಯದೆ ಇರೋದರಿಂದ ಇಷ್ಟೊಂದ್ ಸಮಸ್ಯೆ ಆಗಿದೆ, ನಾಳೆ ಶಾಲೆಗೆ ಹೋಗೋ ಮಕ್ಕಳಿಗೆ ಏನಾದ್ರೂ ತೊಂದ್ರೆ ಆದ್ರೆ ತುಂಬಾ ಬೇಜಾರ್ ಆಗುತ್ತೆ.

ನಾವು ಮಾಡೋ ಕೆಲಸದಿಂದ ಅವರ ಭವಿಷ್ಯ ಹಾಳಾಗಬಾರದು’’ ಇದನ್ನ ಕೇಳಿ ನಾ ಸ್ವಲ್ಪ ವಿಚಲಿತನಾದೆ. ಅವರದೇ ಬದುಕು ಮೂರಾಬಟ್ಟೆಯಾಗಿ ಬವಣೆಯಲ್ಲಿ ಸಿಲುಕಿ ಹಾಳಾಗ್ತಾ ಇರೋ ಸಂದರ್ಭದಲ್ಲೂ ಕೂಡ ಅವರು ಯೋಚ್ನೆ ಮಾಡ್ತ ಇದ್ದಿದ್ದು ಬೇರೆ. ಶಾಲೆಗೆ ಹೋಗೋ ಮಕ್ಕಳಿಗೆ ತೊಂದರೆ ಆದ್ರೆ ಏನ್ ಮಾಡೋದು ಅಂತ. ಇಂಥವರ ಬಗ್ಗೆ ಹೆಂಗೆ ಯೋಚಿಸ್ತಾ ಇದೀವಿ?  ನಾವ್ ಅವರ ಬಗ್ಗೆ ಏನ್ ಯೋಚಿಸ್ತಿದೀವಿ ಮತ್ತೆ ಅವರು ನಮ್ಮ ಬಗ್ಗೆ ಏನ್ ಯೋಚಿಸ್ತಿದಾರೆ?? ಇಂಥದ್ದೊಂದು ಜಿಜ್ಞಾಸೆಯ ನಡುವೆ ಅಮರಾವತಿ ಹುಟ್ಟಿಕೊಂಡಿತು.

ನನ್ನ ವೈಯಕ್ತಿಕ ವಲಯದಲ್ಲಿ ಹೇಳಿದಾಗ ರ ವರೆಗೂ ಯಾವುದೇ ನಿರ್ಮಾಪಕರು ಈ ಸಿನೆಮಾ ಮಾಡಲು ಮುಂದಾಗಲಿಲ್ಲ. ಕಡೆಗೆ ನಮ್ಮ ತಂದೆಯ ಸ್ನೇಹಿತರಾದ ಮಾಧವ ರೆಡ್ಡಿ ಅವರು ಕಥೆ ಕೇಳಿ ಈ ಸಿನೆಮಾನ ನಾನು ಮಾಡ್ತೀನಿ ಅಂತ ಮುಂದೆ ಬಂದ್ರು.

ಯಾಕೆ ಅಚ್ಯುತ್ ಸರ್???

- He is an Indispensable actor. ProjectFrom there Somehow we connected. In fact Dates ClashScriptThe most toughest roleand he has delivered every single timeಯಾವುದೇ ನಲ್ಲೂ ಅವರ ಪಾತ್ರ ತೆಗೆದು ಹಾಕುವುದಕ್ಕೆ ಸಾಧ್ಯವೇ ಇಲ್ಲ ಅಷ್ಟು ಚೆನ್ನಾಗಿ ಮಾಡ್ತಾರೆ. ನನ್ನ ಅವರ ಒಡನಾಟ ‘‘ಮೊಗ್ಗಿನ ಮನಸ್ಸು’’ ಚಿತ್ರದಿಂದ ಶುರುವಾಯ್ತು.

ಅಲ್ಲಿ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ.  ಆಗ್ಲಿಲ್ಲ ಅಂದಿದ್ರೆ ಅವರು ‘‘ಜಟ್ಟ’’ ಮತ್ತು ‘‘ಮೈತ್ರಿ’’ಯಲ್ಲಿ ಕೂಡ ಇರ್ತಾ ಇದ್ರು. 2012ರಲ್ಲಿ ಜಟ್ಟ ಮುಗಿಸಿಕೊಂಡು ಬಂದು ಮೊದಲ ಬಾರಿ ‘‘ಅಮರಾವತಿ’’  ಕೊಟ್ಟಿದ್ದು ಅವರಿಗೆ. ಅಲ್ಲಿಂದ ಅವರು ರೆಡಿ ಆಗಿ ಬಂದ್ರು. ಪಾತ್ರಕ್ಕೆ ಹೇಗೆ ಸೂಕ್ತ ಅಂದ್ರೆ, ಅಚ್ಯುತ್ ಸರ್ ಕಲಿಕೆಗೆ ಯಾವಾಗಲೂ ಮುಂದು. ಪ್ರತಿಭೆ ಇದ್ದರೂ ಕೂಡ ಅವರು ಅಭ್ಯಾಸ ಮಾಡೋದು ನಿಲ್ಲಿಸಲ್ಲ.

ಪ್ರತೀ ಬಾರಿ ಇನ್ನಷ್ಟು ಚೆನ್ನಾಗಿ ಅಭಿನಯಿಸಬೇಕೆಂಬ ಹಂಬಲ ಅವರಿಗೆ. ಈ ಪಾತ್ರ ಅಂತಲ್ಲ ಯಾವ ಪಾತ್ರ ಕೊಟ್ಟರು ಮಾಡ್ತಾರೆ ಅನ್ನೋ ನಂಬಿಕೆ ನನಗೆ ಇರೋದರಿಂದ ಗಳನ್ನ ನಾನು ಅವರಿಗೆ ಇಡಬೇಕಾಗುತ್ತೆ  ಮತ್ತು ಅವರು ಪೋಷಿಸುವ ಪಾತ್ರಕ್ಕೆ ಒಳ್ಳೆ ಆಯಾಮ ಕೊಡ್ತಾರೆ.

ಅಮರಾವತಿ ಶೂಟಿಂಗ್ ಬಗ್ಗೆ ಹೇಳಿ.

WardShooting Shootingwe have to be more responsible-ನಮಗೆ ರಾಜಧಾನಿಯಲ್ಲಿ ಪ್ರತೀ ಗೆ ಹೋಗಿ ಮಾಡಲು ಅವಕಾಶ ಕೊಡ್ತಾ ಇರಲಿಲ್ಲ ಹಾಗಾಗಿ ನಾವು ನೆಲಮಂಗಲದಲ್ಲಿ ಶೂಟಿಂಗ್ ಮಾಡಬೇಕಾಯ್ತು. ನಮ್ಮ ಆಪ್ತರಾದ ಚಿಕಣ್ಣ ಸ್ವಾಮಿ ಇದಕ್ಕೆ ಸಹಾಯ ಮಾಡಿದ್ರು. ಪ್ರತೀ ಬಾರಿ ಚಿತ್ರೀಕರಣದಸಂದರ್ಭದಲ್ಲಿ ಕಸ ತೆಗೆದು ಹಾಕಬೇಕಿತ್ತು.

ಮರುದಿನ  ಹೋದರೆ ಅಲ್ಲಿ ಕೆಲವರು, ‘‘ಸರ್ ಎರಡೆರಡು ಸಲ ಸ್ನಾನ ಮಾಡಬೇಕಾಯ್ತು’’ ಹಾಗೆ ಹೀಗೆ ಅಂತ ಹೇಳ್ತಾ ಇದ್ರು. ಆಗ ನನಗೆ ಅನ್ನಿಸಿದ್ದು, ‘‘ಹಾಗಾದ್ರೆ ಪ್ರತಿ ದಿನ ಕೆಲಸ ಮಾಡ್ತಾರಲ್ಲ ಅವರು ಹೇಗೆ ಮಾಡ್ತಾರೆ?’’ ನಾವು ಒಂದು ಮನೆಯ ಕಸವನ್ನ ಗುಡಿಸಿ ಹೊರಗೆ ಹಾಕಿ ಕೈ ತೊಳೆದುಕೊಂಡು ಬಿಡ್ತೀವಿ.

ಆದರೆ ಇಡೀ ಊರಿನ ಕಸವನ್ನ ತೆಗೆದು ಕೊಂಡು ಹೋಗಿ ಹಾಕುವ ವ್ಯಕ್ತಿಗಳು ನಮ್ಮ ಆರೋಗ್ಯ ಚೆನ್ನಾಗಿರಲಿ ಅಂತ ಅವರ ಆರೋಗ್ಯ ಕೆಡಿಸಿಕೊಳ್ಳುವ ಜನ. ಇದೆಲ್ಲ ನೋಡಿದಾಗ ನನಗೆ ಅನ್ನಿಸೋದು ಇಂಥ ಬದುಕು ನಮಗೆ ಸಿಕ್ಕಿರೋದು ಧನ್ಯ.

ಈ ಅವಕಾಶ ಸಿಕ್ಕಿರೋದಕ್ಕೆ  ಮತ್ತು ಆ ಜವಾಬ್ದಾರಿಯನ್ನ ಸಂಪೂರ್ಣವಾಗಿ ಅನುಭವಿಸಿ ಮತ್ತು ಅದನ್ನ ಪೂರ್ಣ ಪ್ರಮಾಣಕ್ಕೆ ತರಬೇಕಾದಂತಹ ಒಂದು ದೈವ ನಿಗದಿತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇವು ಈ ಸಿನೆಮಾ ಮಾಡೋವಾಗ ಅನ್ನಿಸಿರೋ ಕೆಲವು ಸತ್ಯಗಳು.

ನವಿಲಾದವರುನಿಂದ ಶುರುವಾಗಿ ಅಮರಾವತಿ ತನಕ ನಿಮ್ಮ ಪಯಣ ಹೇಗಿತ್ತು ಹೇಳಿ

All these years my family has stood beside me. Clarity Process But Convert Content Based Hope this has answered your question.

- ಪ್ರತೀ ಬಾರಿಯೂ ಹೊಸ ಹೊಸ ಸವಾಲುಗಳನ್ನ ಸ್ವೀಕರಿಸುತ್ತಾ ನನ್ನ ಆಸ್ತಿತ್ವವನ್ನ ಪ್ರಶ್ನಿಸಿಕೊಳ್ಳುತ್ತಾ ಈ ಪಯಣ ಮುಂದುವರಿದಿದೆ. ನವಿಲಾದವರು ಮಾಡಬೇಕಾದಾಗ ಇದ್ದ ಹುಂಬತನ ಈಗ ಮಾಯಾವಾಗಿದೆ. ಆಗಿನ ದಿನಗಳಿಗಿಂತ ಈಗಜವಾಬ್ದಾರಿಗಳು ಹೆಚ್ಚಿವೆ. ಜೊತೆಗೆ ಸಿನೆಮಾ ಮತ್ತು ವೈಯಕ್ತಿಕ ಬದುಕು ಎರಡನ್ನೂ ಸರಿ ಸಮಾನವಾಗಿ ತೂಗಿಸಿಕೊಂಡು ಹೋಗುವ ಭಾರ ನನ್ನ ಮೇಲಿದೆ.

ಈಗ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಯೋಚಿಸಿ ತೆಗೆದುಕೊಳ್ಳಬೇಕಾಗಿದೆ. ಇಲ್ಲಿಯವರೆಗೂ ನನ್ನ ಪಯಣ ಹೆಚ್ಚೆಚ್ಚು ಬಾಂಧವ್ಯ ಪೂರ್ಣವಾಗಿತ್ತು. ಯಾರೆಲ್ಲ ನಿಜವಾದ ಸ್ನೇಹಿತರಿದ್ದಾರೋ ಅವರನ್ನೆಲ್ಲ ಗುರುತಿಸುತ್ತ ಹೋದ್ವೀ. ನಮ್ಮೋರು ಯಾರು ಅನ್ನೋ ಹೆಚ್ಚು ಸಿಕ್ತಾ ಹೋಗುತ್ತೆ. ಈ ಎಲ್ಲ ನಲ್ಲಿ ನಾವು ತೆಗೆದು ಕೊಳ್ಳುವ ಪ್ರತಿಯೊಂದು ನಿರ್ಧಾರ ಸರಿಯೋ ಅಥವಾ ತಪ್ಪೋ ಅನ್ನೋ ಅನುಮಾನದ ಕುಲುಮೆಯಲ್ಲಿ ಬೇಯಿಸ್ತಾ ಬೇಯಿಸ್ತಾ ನಮ್ಮ ವ್ಯಕ್ತಿತ್ವಗಳು ನಿಧಾನವಾಗಿ ಹೊರ ಬರ್ತಾ ಇದೆ. ಈಸಂದರ್ಭದಲ್ಲಿ ಮುಂದೆ ನಾವು ಮಾಡ್ಬೇಕು ಅಂದು ಕೊಂಡಿರೋ ಕೆಲಸಗಳು ಆಗುತ್ತಾ ಇಲ್ವಾ ಅನ್ನೋ ಪ್ರಶ್ನೆಗಳು ಕಾಡ್ತಾವೆ.

ಇವೆಲ್ಲದರ ಜೊತೆಗೆ ‘‘ಅಮರಾವತಿಯ’’ ಗೆಲುವು ಕೂಡ ಆವಶ್ಯಕವಾಗುತ್ತೆ. ನವಿಲಾದವರು ಶುರುವಾಗಿ ಅಮರಾವತಿ ಮುಗಿಯುವ ಪಯಣದಲ್ಲಿ ಒಂದು ಸಣ್ಣ ವರ್ಗ ನನ್ನನ್ನ ಹೊಗಳ್ತಾ ಇದೆ, ನನ್ನ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಅದ್ಯಾವುದೂ ಆರ್ಥಿಕವಾಗಿ  ಆಗ್ತಾ ಇಲ್ಲ. ಹಾಗಾದಾಗ ಏನಾಗುತ್ತೆ ಇಂಥದ್ದೇ ಚಿತ್ರವನ್ನ ಬೇರೊಬ್ಬ ನಿರ್ಮಾಪಕನಿಗೆ ಮಾಡಿ ಕೊಡೋದು ಕಷ್ಟವಾಗುತ್ತೆ.

ಈ ಎಲ್ಲದರ ನಡುವೆ ಇನ್ನೊಂದು ಚಿತ್ರ ಹೇಗೆ ಮಾಡೋದು ಅನ್ನೋ ಪ್ರಶ್ನೆ ಕಾಡಲಿಕ್ಕೆ ಶುರುವಾಗುತ್ತೆ  ಮೊನ್ನೆ ನೀನಾಸಂ ಸತೀಶ್ ಕೂಡ ಹೇಳಿದ್ರು ಮತ್ತೆ ಇನ್ನು ಹಲವಾರು ನಟರು ನಿಮ್ಮ ಜೊತೆ ಕೆಲಸ ಮಾಡ್ಬೇಕು ಅಂತಿದಾರೆ ಆದ್ರೆ ಗಿರಿರಾಜ್ ಅವರ ದಾರಿ``Parallel Cinema'' why not Mainstream commercial cinema??

-Parallel Cinema MainSteam Cinema Main Stream Commercial For Example Expectation ಅಥವಾ ಅಂತ ಬೇರೆ ಬೇರೆಯೇನಿಲ್ಲ. ಯಾವುದೇ ಸಿನೆಮಾ ಆದರೂ ಪ್ರೇಕ್ಷಕನನ್ನ ರಂಜಿಸೋ ಕೆಲಸ ಮಾಡಬೇಕು. ಆದರೆ ಈ ರಂಜಿಸೋ ನೆಪದಲ್ಲಿ ವ್ಯಕ್ತಿ ಪೂಜೆ, ವೈಭವೀಕರಣ ಇವೆಲ್ಲವನ್ನ ಬದಿಗಿಟ್ಟು ಭೂತಯ್ಯನ ಮಗ ಅಯ್ಯು ಅಥವಾ ಬಂಗಾರದ ಮಾನುಷ್ಯದ ತರಹ ಸಿನೆಮಾಗಳು ಮಾಡಬೇಕು ಅನ್ನೋದು ನನ್ನ ಆಸೆ.

ಮೊದಲಿಂದಾನು ನಾನು ಸಿದ್ದಲಿಂಗಯ್ಯನವರ ಸಿನೆಮಾಗಳನ್ನ ನೋಡಿ ಅದರಿಂದ ಪ್ರೇರಿತನಾದವನು ಹಾಗಾಗಿ ಸಮಾಜ ಮುಖಿ ಸಿನೆಮಾಗಳತ್ತ ಒಲವು ಜಾಸ್ತಿ ಇದೆ ಅಂತ ಹೇಳಬಹುದು. ಈವತ್ತಿನ ಸಿನೆಮಾದ ಸಮಸ್ಯೆ ಏನಾಗ್ಬಿಟ್ಟಿದೆ ಅಂದ್ರೆ ಅದು ಬಂಡವಾಳಶಾಹಿಯ ಹಾಗೂ ವೈಭವೀಕರಣದ ಉತ್ತುಂಗಕ್ಕೆ ಹೋಗಿ ಅಲ್ಲಿ ಯಾವುದೇ ಕಥೆ ಅಥವಾ ಸಿನೆಮಾ ಯಾವುದೇ ಉಳಿದುಕೊಳ್ಳುವುದೇ ಇಲ್ಲ.

ದಂಗಲ್ ಅಂತ ಒಂದು ಸಿನೆಮಾನ ತಕ್ಕೊಂಡ್ರೆ ಅಲ್ಲಿ ಒಬ್ಬ ನಾಯಕ ನಟ ತುಂಬಾ ಕಡೆ ಸೋಲ್ತಾನೆ, ಬೇಡ್ತಾನೆ ಈ ತರಹದ ಕಥೆಗಳನ್ನ ನಮ್ಮವರು ಮಾಡಲಿಕ್ಕೆ ಸ್ವಲ್ಪ ಹಿಂಜರಿತಾ ಇದಾರೆ ಇದಕ್ಕೆ ಮಾರುಕಟ್ಟೆಯ ಸಮಸ್ಯೆ ಕೂಡ ಕಾರಣವಾಗಿರಬಹುದು. ನೀನಾಸಂ ಸತೀಶ್ ಮತ್ತು ಯಾವುದೇ ನಟರ ಜೊತೆ ಯಾವಾಗ ಬೇಕಾದರೂ ಕೆಲಸ ಮಾಡಬಹುದು. ಸಂದರ್ಭ ಕೂಡಿ ಬರಬೇಕು ಕಥೆ ಪೂರಕವಾಗಿರಬೇಕು ಮತ್ತು ಅವರ ಮತ್ತು ನನ್ನ ಎರಡು ಸರಿಹೊಂದಿದಾಗ ಖಂಡಿತವಾಗಿಯೂ ಸಿನೆಮಾ ಮಾಡಬಹುದು.

ಸಂದರ್ಶನ: ದಿನಕರ್ ಶ್ರೀರಂಗಪಟ್ಟಣ

Writer - ಗಿರಿರಾಜ್ ಬಿ.ಎಂ.

contributor

Editor - ಗಿರಿರಾಜ್ ಬಿ.ಎಂ.

contributor

Similar News