ಮುಂಬೈ ನಗರಪಾಲಿಕೆಯಲ್ಲಿ ಬಿಜೆಪಿ-ಸೇನೆ ಮೈತ್ರಿಯ ಸೂಚನೆ ಜೊತೆಗೆ ಸಾಗಬೇಕು, ಬೇರೆ ಆಯ್ಕೆಯೇ ಇಲ್ಲ: ನಿತಿನ್ ಗಡ್ಕರಿ

Update: 2017-02-24 14:12 GMT

ಮುಂಬೈ, ಫೆ.24: ಮುಂಬೈ ನಗರಪಾಲಿಕೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಾಗಿ ಸಾಗುವ ಹೊರತು ಅನ್ಯ ಆಯ್ಕೆ ಇಲ್ಲ ಎಂದು ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಹೇಳಿದ್ದಾರೆ.

ಎರಡೂ ಪಕ್ಷಗಳಿಗೂ ಬೇರೆ ಆಯ್ಕೆಯೇ ಇಲ್ಲ. ಜೊತೆಯಾಗಿ ಸಾಗಬೇಕಾದ ಪರಿಸ್ಥಿತಿ ಈಗ ಬಂದಿದೆ. ಈ ವಿಷಯದಲ್ಲಿ ಅಂತಿಮ ನಿರ್ಣಯವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ತೆಗೆದುಕೊಳ್ಳಲಿದ್ದಾರೆ. ಇಬ್ಬರೂ ಸಾಕಷ್ಟು ಅನುಭವಿಗಳು ಮತ್ತು ಇಬ್ಬರೂ ಸೇರಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿ್ವಾಸವಿದೆ ಎಂದು ಗಡ್ಕರಿ ಹೇಳಿದರು.

ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರನ್ನು ಟೀಕಿಸಿ ಬರೆಯುತ್ತಿರುವ ಬಗ್ಗೆ ಆಕ್ಷೇಪಿಸಿದ ಗಡ್ಕರಿ, ನಮ್ಮೆಂದಿಗೆ (ಬಿಜೆಪಿ) ಮೈತ್ರಿ ಬೇಕು ಎಂದಿದ್ದರೆ ಸಾಮ್ನಾದಲ್ಲಿ ಬರೆಯುತ್ತಿರುವ ಲೇಖನಗಳನ್ನು ಪರಿಶೀಲಿಸಬೇಕಾಗುತ್ತದೆ. ದಿನಂಪ್ರತಿ ನಮ್ಮ ನಾಯಕರನ್ನು ಅವಮಾನಿಸಿ ಬರೆಯುತ್ತಿರುವುದು ಮೈತ್ರಿ ಪ್ರಕ್ರಿಯೆಗೆ ಪೂರಕವಾಗಿಲ್ಲ . ಈ ವಿಷಯ ಸರಿಯಾದರೆ ಎಲ್ಲವೂ ಸರಿಹೋಗಬಹುದು ಎಂಬ ವಿಶ್ವಾಸವಿದೆ . ‘ಸಾಮ್ನಾ’ದ ಕಾರಣದಿಂದ ಉಭಯ ಪಕ್ಷಗಳ ನಡುವಿನ ಸಂಬಂಧಕ್ಕೆ ಧಕ್ಕೆಯಾಗಬಾರದು ಎಂದರು.

ಬಿಜೆಪಿಯು 10 ನಗಪಾಲಿಕೆಯಲ್ಲಿ 8ರಲ್ಲಿ ಜಯ ಗಳಿಸಿದ್ದರೆ, ಮುಂಬಯಿ ನಗರಪಾಲಿಕೆಯಲ್ಲಿ ಶಿವಸೇನೆ 84 , ಬಿಜೆಪಿ 82 ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News