ಟೆಲಿಕಾಂ ಕಂಪೆನಿಗಳ ವಿಲೀನ: ಕೆಲಸ ಕಳೆದುಕೊಳ್ಳಲಿರುವ ನೌಕರರು ?

Update: 2017-02-25 09:03 GMT

 ಮುಂಬೈ, ಫೆ. 25: ಪ್ರಮುಖ ಟೆಲಿಕಾಂ ಕಂಪೆನಿಗಳ ವಿಲೀನದಿಂದಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶೇ.15ರಷ್ಟು ಮಂದಿಗೆ ಕೆಲಸ ಇಲ್ಲದಾಗುವುದು ಎಂದು ವರದಿಯಾಗಿದೆ.

ಆರ್ಕೋಂ-ಏರ್‌ಸೆಲ್, ವೊಡಫೋನ್-ಐಡಿಯ, ಏರ್‌ಟೆಲ್-ಟೆಲಿನೋರ್ ಕಂಪೆನಿಗಳು ವಿಲೀನಗೊಳ್ಳುವುದನ್ನು ಈಗಾಗಲೇ ಘೋಷಿಸಿವೆ. ಆರು ಕಂಪೆನಿಗಳು ಒಟ್ಟು ಸೇರಿ ಮೂರು ಕಂಪೆನಿಗಳಾದಾಗ ಅದಕ್ಕೆ ತಕ್ಕಂತೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಏಳು ಉದ್ಯೋಗಿಗಳಿಗೆ ಒಬ್ಬರಂತೆ ಕೆಲಸ ಕಳಕೊಳ್ಳುವ ಸಾಧ್ಯತೆ ಇದೆಯೆಂದು ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿರುವ ಎಚ್.ಆರ್. ಕಂಪೆನಿ ಹೇಳಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News