ಭಾರತ ಬಿಜೆಪಿ ನಾಯಕರ ಖಾಸಗಿ ಸೊತ್ತಲ್ಲ: ಎಂವಿ ಜಯರಾಜನ್

Update: 2017-02-25 10:55 GMT

ಕೊಚ್ಚಿ, ಫೆ. 25: ಮುಖ್ಯಮಂತ್ರಿಯದ್ದೇ ಅಲ್ಲ ಯಾವನೇ ಪ್ರಜೆಯ ಸಂಚಾರ ಸ್ವಾತಂತ್ರ್ಯವನ್ನು ತಡೆಯುವುದಕ್ಕೆ ಭಾರತ ಬಿಜೆಪಿ ನಾಯಕರ ಖಾಸಗಿ ಸೊತ್ತಲ್ಲ ಎಂದು ಸಿಪಿಎಂ ನಾಯಕ ಎಂ.ವಿ. ಜಯರಾಜನ್ ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರನ್ನು ಮಂಗಳೂರಿನಲ್ಲಿ ತಡೆಯುತ್ತೇವೆ ಎಂದು ಘೋಷಿಸಿದ ಬಿಜೆಪಿ ಮತ್ತೊಮ್ಮೆ ತಾನು ಸಂವಿಧಾನ ಪ್ರಕಾರ ಆಳ್ವಿಕೆ ನಡೆಸುವುದಿಲ್ಲ ಎಂದು ಸಾಬೀತುಪಡಿಸಿದೆ ಎಂದು ಸಿಪಿಎಂ ನಾಯಕ ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 ಬಿಜೆಪಿಯವರು ಈಗ ಪ್ರಜಾಪ್ರಭುತ್ವ ಯುಗದಲ್ಲಿ ಜೀವಿಸುತ್ತಿಲ್ಲ. ಬದಲಾಗಿ ಶಿಲಾಯುಗದ ಕಾಲಘಟ್ಟದಲ್ಲಿ ಜೀವಿಸುತ್ತಿದ್ದಾರೆ. ಮಂಗಳೂರಿನಲ್ಲಿ ಮಾತ್ರವಲ್ಲ ಕೇರಳದ ಮುಖ್ಯಮಂತ್ರಿ ದೇಶದಲ್ಲಿ ಎಲ್ಲೆ ಹೋದರೂ ತಡೆಯುತ್ತೇನೆ ಎಂದು ಹೇಳಿದ್ದು, ಮಧ್ಯಪ್ರದೇಶಕ್ಕೆ ಹೋದ ಮುಖ್ಯಮಂತ್ರಿಯನ್ನು ಭದ್ರತೆಯ ನೆಪ ಹೇಳಿ ಅಲ್ಲಿ ಬಿಜೆಪಿ ಸರಕಾರ ಹಿಂತೆರಳುವಂತೆ ಮಾಡಿದ್ದು, ಅವರು, ದಲಿತ, ಅಲ್ಪಸಂಖ್ಯಾತ ವಿಭಾಗದವರನ್ನು ಮಾತ್ರವಲ್ಲ ಪ್ರಜಾಪ್ರಭುತ್ವವನ್ನು ಕೂಡಾ ತಾವು ಒಪ್ಪುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಜಯರಾಜನ್ ಟೀಕಿಸಿದ್ದಾರೆ.

ಕೇರಳದಲ್ಲಿ ಶೇ.2ರಷ್ಟು ಬಿಜೆಪಿಗರು ಇದ್ದಾಗ ಜನರನ್ನು ಕೊಂದಿದ್ದೇವೆ. ಪ್ರತಿಹೊಡೆತ ನೀಡಿದ್ದೇವೆ ಎಂದು ಬಿಜೆಪಿ ನಾಯಕ ಕೆ. ಸುರೇಂದ್ರನ್ ಭಾಷಣಮಾಡಿದ್ದಾರೆ. ಹೀಗೆ ಕೊಲ್ಲುತ್ತಾ ಈಗ ಬಿಜೆಪಿಯವರು ಶೇ.16ಕ್ಕೆ ತಲುಪಿದ್ದೇವೆ ಎಂದು ಅವರು ಹೇಳಿದರು. ಅಂದರೆ ಶೇ.ಎರಡರಷ್ಟಿದ್ದಾಗ ಕೊಂದವರು ಈಗ ಶೇ.16ರಷ್ಟು ಆಗಿರುವಾಗ ಖಂಡಿತಾ ಕೊಲ್ಲುತ್ತೇವೆ ಎಂದುಅವರು ಘೋಷಿಸಿದ್ದಾರೆ. ಕೊಲೆಪ್ರಕರಣ ದಾಖಲಿಸಲು ಸಾಧ್ಯವಿರುವ ಹೇಳಿಕೆ ಇದು ಆದ್ದರಿಂದ ಅವರ ವಿರುದ್ಧ ಕೇಸು ದಾಖಲಿಸಬೇಕೆಂದು ಜಯರಾಜನ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸಿಪಿಎಂ ಅಷ್ಟು ಪ್ರಭಾವಶಾಲಿಯಲ್ಲ. ಮುಖ್ಯಮಂತ್ರಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನೆರವಾದದ್ದಕ್ಕಾಗಿ ಸುರೇಂದ್ರನ್ ಮತ್ತು ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಯರಾಜನ್ ವ್ಯಂಗ್ಯವಾಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News