ನೌಕಾಪಡೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ : ಇಬ್ಬರು ಅಧಿಕಾರಿಗಳ ವಜಾ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2017-02-25 13:36 GMT

ಹೊಸದಿಲ್ಲಿ,ಫೆ.25: 2005ರ ನೌಕಾಪಡೆ ‘ಯುದ್ಧಕೋಣೆ ಸೋರಿಕೆ ’ ಎಂದೇ ಹೆಸರಾದ ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಇಬ್ಬರು ನೌಕಾಪಡೆ ಅಧಿಕಾರಿಗಳನ್ನು ವಜಾಗೊಳಿಸುವ ಸರಕಾರದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.

ಶೋ-ಕಾಸ್ ನೋಟಿಸ್ ಜಾರಿಗೊಳಿಸದೆ ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡದೇ ತಮ್ಮನ್ನು ಸೇವೆಯಿಂದ ವಜಾಗೊಳಿಸುವಂತಿಲ್ಲ ಎಂಬ ನೌಕಾಪಡೆಯ ಅಧಿಕಾರಿಗಳಾದ ಕಮಾಂಡರ್ ವಿಜೇಂದ್ರ ರಾಣಾ ಮತ್ತು ಕಮಾಂಡರ್ ವಿ.ಕೆ.ಝಾ ಅವರ ವಾದವನ್ನು ತಿರಸ್ಕರಿಸಿದ್ದ ಸಶಸ್ತ್ರ ಪಡೆಗಳ ನ್ಯಾಯಾಧಿಕರಣ(ಎಎಫ್‌ಟಿ)ದ 2013ರ ಆದೇಶದದಲ್ಲಿ ಹಸ್ತಕ್ಷೇಪ ಮಾಡಲು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ನಿರಾಕರಿಸಿತು.

2005ರಲ್ಲಿ ನೌಕಾಪಡೆಯ ಯುದ್ಧಕೋಣೆಯಿಂದ ಮತ್ತು ವಾಯುಪಡೆಯ ಮುಖ್ಯಕಚೇರಿಯಿಂದ 7,000 ಪುಟಗಳಿಗೂ ಅಧಿಕ ಸೂಕ್ಷ್ಮ ರಕ್ಷಣಾ ಮಾಹಿತಿಗಳು ಸೋರಿಕೆಯಾಗಿದ್ದವು. ರಕ್ಷಣಾ ಪಡೆಗಳ ರಹಸ್ಯಗಳನ್ನೊಳಗೊಂಡ ಅನಧಿಕೃತ ಪೆನ್ ಡ್ರೈವ್‌ವೊಂದು ಅಧಿಕಾರಿಯೋರ್ವನ ಬಳಿ ಪತ್ತೆಯಾದಾಗ ಸೂಕ್ಷ್ಮ ಮಾಹಿತಿಗಳ ಸೋರಿಕೆ ಬೆಳಕಿಗೆ ಬಂದಿತ್ತು. ಮಾಹಿತಿಗಳ ಸೋರಿಕೆಯಲ್ಲಿ ಝಾ ಮತ್ತು ರಾಣಾ ಅವರ ಪತ್ರವಿದೆ ಎಂದು ವಿಚಾರಣಾ ಮಂಡಳಿಯು ಎತ್ತಿ ಹಿಡಿದ ಬಳಿಕ 2015,ಅಕ್ಟೋಬರ್‌ನಲ್ಲಿ ಸರಕಾರವು ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News