×
Ad

63.44 ಲಕ್ಷ ರೂ. ವೌಲ್ಯದ ನಿಷೇಧಿತ ಕರೆನ್ಸಿ ಹೊಂದಿದ್ದ ಬಿಜೆಪಿ ಕಾರ್ಪೊರೇಟರ್ ಸೋದರನ ಬಂಧನ

Update: 2017-02-26 23:44 IST

   ಜೈಪುರ, ಫೆ.26: ಇಲ್ಲಿನ ಬಾನಿ ಪಾರ್ಕ್ ಎಂಬಲ್ಲಿ 63.44 ಲಕ್ಷ ರೂ. ಮುಖಬೆಲೆಯ ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ಹೊಂದಿದ್ದ ಬಿಜೆಪಿ ಕಾರ್ಪೊರೇಟರ್ ಒಬ್ಬರ ಸಹೋದರನನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳವು ರವಿವಾರ ಬಂಧಿಸಿದೆ.

ಅಮಾನ್ಯಗೊಂಡ ನೋಟುಗಳನ್ನು, ಹೊಸ ಕರೆನ್ಸಿ ನೋಟುಗಳ ಜೊತೆಗೆ ವಿನಿಮಯ ಮಾಡಿಕೊಳ್ಳಲು ಆಗಮಿಸುತ್ತಿದ್ದಾರೆಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಆರೋಪಿ ಪವನ್‌ಶರ್ಮಾನನ್ನು ಬಂಧಿಸಿದರು.

ಆರೋಪಿಯು, ಜೈಪುರದ ಬಿಜೆಪಿ ಕಾರ್ಪೊರೇಟರ್ ಮಾನ್ ಪಂಡಿತ್ ಅವರ ಸಹೋದರನೆಂದು ವಿಚಾರಣೆಯಿಂದ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹದಳಕ್ಕೆ ವರ್ಗಾಯಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

   ವಶಪಡಿಸಿಕೊಳ್ಳಲಾದ ನೋಟುಗಳ ಪೈಕಿ 1 ಸಾವಿರ ರೂ.ಮುಖಬೆಲೆಯ 40 ಲಕ್ಷ ರೂ. ವೌಲ್ಯದ ನೋಟುಗಳಾಗಿದ್ದರೆ, ಉಳಿದವು 500 ರೂ. ಮುಖಬೆಲೆಯದ್ದೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News