×
Ad

ಸೇತುವೆಯಿಂದ ಕಾಲುವೆಗೆ ಉರುಳಿದ ಬಸ್‌; 11ಸಾವು

Update: 2017-02-28 11:47 IST

ವಿಜಯವಾಡ, ಫೆ.28: ಬಸ್ಸೊಂದು ಸೇತುವೆಯಿಂದ  ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಹನ್ನೊಂದು ಮಂದಿ ಮೃತಪಟ್ಟು 30ಕ್ಕೂ ಹೆಚ್ಚು  ಪ್ರಯಾಣಿಕರು ಗಾಯಗೊಂಡ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಲ್ಲುಪಾಡು ಎಂಬಲ್ಲಿ ಇಂದು ಬೆಳಗ್ಗೆ  ಸಂಭವಿಸಿದೆ.
ಭುವನೇಶ್ವರದಿಂದ ಹೈದಾರಾಬಾದ್ ತೆರಳುತ್ತಿದ್ದ ಬಸ್ ಖಾಸಗಿ  ಬೆಳಗ್ಗೆ 5.30 ರ ಸುಮಾರಿಗೆ ಸೇತುವೆಯ ಬಳಿ  ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು   ಕಾಲುವೆಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಭುವನೇಶ್ವರದಿಂದ ತೆಲಂಗಾಣ ರಾಜ್ಯಕ್ಕೆ ಬಂದ ಈ ಖಾಸಗಿ ಬಸ್ ವಿಜಯವಾಡ ಬಳಿ ನಿಂತಿತ್ತು, ಬಳಿಕ  ಚಾಲಕನನ್ನು ಬದಲಿಸಿಕೊಂಡು ಹೊಸ ಚಾಲಕನೊಂದಿಗೆ ಪುನಃ ಪ್ರಯಾಣ ಮಾಡುತ್ತಿದ್ದಾಗ ಚಾಲಕ ನಿದ್ರೆಗೆ ಜಾರಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 ಗಾಯಾಳುಗಳನ್ನು ಸ್ಥಳೀಯ ನಂದಿಗಾಮ ಮತ್ತು ವಿಜಯವಾಡ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News