ರಾಷ್ಟ್ರಪತಿ ನಾಳೆ ಕೊಚ್ಚಿಗೆ
Update: 2017-03-01 11:45 IST
ಕೊಚ್ಚಿ,ಮಾ.1: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಒಂದು ದಿನದ ಸಂದರ್ಶನಕ್ಕಾಗಿ ಗುರುವಾರ ಕೊಚ್ಚಿಗೆ ಬರಲಿದ್ದಾರೆ. ಸಂಜೆ 3:35ಕ್ಕೆ ಎರ್ನಾಕುಲಂ ನೆವಲ್ ಏರ್ ಬೇಸ್‌ಗೆ ಬಂದಿಳಿಯುವ ಅವರಿಗೆ ಅಧಿಕೃತ ಸ್ವಾಗತ ನೀಡಲಾಗುವುದು.
ಸಂಜೆ ನಾಲ್ಕು ಗಂಟೆಗೆ ಪೋರ್ಟ್‌ಕೊಚ್ಚಿಯಲ್ಲಿ ನಡೆಯುವ ಸೆಮಿನಾರ್‌ನ್ನು ಅವರು ಉದ್ಘಾಟಿಸಲಿರುವರು.ರಾಜ್ಯಪಾಲ ಜಸ್ಟಿಸ್ ಪಿ.ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆಯ ನಂತರ ಪೋರ್ಟ್‌ಕೊಚ್ಚಿಯಲ್ಲಿ ನಡೆಯುವ ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ. 5:15ಕ್ಕೆ ಮೆರಿಡಿಯನ್ ಹೊಟೇಲ್‌ನಲ್ಲಿ ಕೆ.ಎಸ್. ರಾಜಮನಿ ಮೆಮೊರಿಯಲ್ ಭಾಷಣ ಮಾಡಿದ ಬಳಿಕ ಸಂಜೆ 6:50 ಕ್ಕೆ ಕೊಚ್ಚಿಯಿಂದ ವಾಪಸು ಪ್ರಯಾಣಗೈಯ್ಯಲಿದ್ದಾರೆ ಎಂದು ವರದಿ ತಿಳಿಸಿದೆ.