×
Ad

ಇವರು ಉತ್ತರ ಪ್ರದೇಶದ 'ಅತ್ಯಂತ ಪ್ರಾಮಾಣಿಕ' ಶಾಸಕ ಆಲಂ ಬದಿ

Update: 2017-03-01 11:54 IST

ಲಕ್ನೌ, ಮಾ.1: ಹಣ ಬಲ ಮತ್ತು ಸ್ನಾಯು ಬಲ ಇಲ್ಲದವರು ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನ್ನುವಂತಹ ರಾಜ್ಯ ಉತ್ತರ ಪ್ರದೇಶ. ಆದರೆ ಈ ರಾಜ್ಯದಲ್ಲೂ ಕೇವಲ ರೂ.10,000 ತಮ್ಮ ಖಾತೆಯಲ್ಲಿಟ್ಟುಕೊಂಡು ಚುನಾವಣೆ ಸ್ಪರ್ಧಿಸಿ ಗೆದ್ದಂತಹ ಶಾಸಕರೊಬ್ಬರು ಇದ್ದಾರೆ. ಅವರು ಬಸ್ಸುಗಳಲ್ಲಿ ಸಂಚರಿಸುತ್ತಾರೆ. ತಮ್ಮ ಮನೆಯನ್ನು ತಾವೇ ಗುಡಿಸುತ್ತಾರೆ ಹಾಗೂ ಅತೀ ಅಗ್ಗದ ಬಟ್ಟೆ ಧರಿಸುತ್ತಾರೆ. ಅವರೇ ನಿಜಾಮಾಬಾದಿನ ಶಾಸಕ ಆಲಂ ಬದಿ. ಈಗಾಗಲೇ ಮೂರು ಚುನಾವಣೆಗಳಲ್ಲಿ ವಿಜಯ ಸಾಧಿಸಿರುವ ಅವರು ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ಬದಿಗೆ 2012ರಲ್ಲಿ ಅಖಿಲೇಶ್ ಯಾದವ್ ಸರಕಾರ ಸಚಿವ ಹುದ್ದೆ ನೀಡಲು ಮುಂದೆ ಬಂದಿತ್ತಾದರೂ ಅವರು ಅದನ್ನು ನಿರಾಕರಿಸಿ ತಾವು ಕೇವಲ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಈ 82 ವರ್ಷದ ಶಾಸಕ 2012ರಲ್ಲಿ ಚುನಾವಣೆ ಸ್ಪರ್ಧಿಸಿದಾಗ ಅವರ ಬ್ಯಾಂಕ್ ಖಾತೆಯಲ್ಲಿದ್ದಿದ್ದು ಕೇವಲ ರೂ.9000. ಈ ಶಾಸಕನ ಬಳಿ ಇರುವ ಮೊಬೈಲ್ ಸೆಟ್ ಬೆಲೆ ಸುಮಾರು ರೂ.1,000 ಎಂದು ಕೇಳಿದರೆ ಆಶ್ಚರ್ಯವಾಗದೆ ಇರದು.

ಇಲ್ಲಿಯ ತನಕ ತಮ್ಮ ಚುನಾವಣಾ ಪ್ರಚಾರ ವೆಚ್ಚ ಸುಮಾರು ರೂ.2 ಲಕ್ಷ ಆಗಿರಬಹುದು ಎಂದು ಅವರು ಹೇಳುತ್ತಾರೆ. ಜನರ ಸೇವೆ ಬಿಟ್ಟು ಅವರು ಬೇರೆ ಯಾವುದೇ ಉದ್ಯೋಗ ಮಾಡುತ್ತಿಲ್ಲ. ಪ್ರತಿ ದಿನ ಅವರು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಜನರೊಂದಿಗೆ ಕಳೆಯುತ್ತಾರೆ. ಅವರು ಒಮ್ಮೆ ಚುನಾವಣೆ ಸೋತಾಗಲೂ ಜನರ ಬಳಿ ಹೋಗುವುದನ್ನು ಬಿಟ್ಟಿರಲಿಲ್ಲ.

ಬದಿ ಗೆ ಆರು ಮಂದಿ ಮಕ್ಕಳಿದ್ದು ಅವರ ಒಬ್ಬ ಪುತ್ರ ಸಣ್ಣ ಪೀಠೋಪಕರಣ ಅಂಗಡಿ ಹೊಂದಿದ್ದರೆ, ಇನ್ನೊಬ್ಬ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂರನೇ ಪುತ್ರ ಅವರ ಪಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News