ಖ್ಯಾತ ಅಂಕಣಕಾರ, ಹಾಸ್ಯ ಲೇಖಕ ತಾರಕ್ ಮೆಹ್ತಾ ನಿಧನ
Update: 2017-03-01 12:03 IST
ಅಹ್ಮದಾಬಾದ್,ಮಾ.1: ಭಾರತದ ಖ್ಯಾತ ಅಂಕಣಕಾರ, ಹಾಸ್ಯ ಲೇಖಕ ಹಾಗೂ ನಾಟಕಕಾರ ತಾರಕ್ ಮೆಹ್ತಾ(87 ವರ್ಷ) ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾರಕ್ ಮೆಹ್ತಾ ಅವರು ಗುಜರಾತ್ ಭಾಷೆಯಲ್ಲಿ ಬರೆದಿದ್ದ ಅಂಕಣಬರಹವನ್ನು ಆಧರಿಸಿ 2008ರಲ್ಲಿ ಸಬ್ ಟಿವಿಯಲ್ಲಿ ಪ್ರಸಾರವಾಗಿದ್ದ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಕಾರ್ಯಕ್ರಮ ಚಾನಲ್‌ಗೆ ಭಾರೀ ಹೆಸರು ತಂದುಕೊಟ್ಟಿತ್ತು. ಮೆಹ್ತಾ ನಿಧನಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೋಕ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಲೇಖಕ ಹಾಗೂ ಪದ್ಮಶ್ರೀ ಪುರಸ್ಕೃತ ತಾರಕ್ ಮೆಹ್ತಾ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರ ಆತ್ಮಕ್ಕೆ ಭಗವಂತ ಶಾಂತಿ ಅನುಗ್ರಹಿಸಲಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮೃತರು ಮೊದಲ ಪತ್ನಿಯ ಪುತ್ರಿಯನ್ನು ಅಗಲಿದ್ದಾರೆ.