ದೇಶಭಕ್ತಿಯ ಹೆಚ್ಚಿಸಲು ಆರೆಸ್ಸೆಸ್‌ನಿಂದ ಕಿರುಚಿತ್ರ ಉತ್ಸವ
ಕೋಲ್ಕತಾ,ಮಾ.2: ಆರೆಸ್ಸೆಸ್ ದೇಶದಲ್ಲಿ ದೇಶಭಕ್ತಿಯನ್ನು ಹೆಚ್ಚಿಸಲಿಕ್ಕಾಗಿ ಕಿರುಚಿತ್ರ ಮತ್ತು ಡಾಕ್ಯುಮೆಂಟರಿ ಉತ್ಸವವನ್ನು ಆಯೋಜಿಸಲಿದೆ. ಆರೆಸ್ಸೆಸ್ ಇದಕ್ಕಾಗಿ ಸಿನೆಮಾ ನಿರ್ಮಿಸುವವರಿಗೆ ಹಣಕೂಡಾ ಕೊಟ್ಟಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ.
ನಾವು ನಮ್ಮ ಸಿನೆಮಾಗಳ ಮೂಲಕ ಭಾರತೀಯತೆ ಮತ್ತು ರಾಷ್ಟ್ರೀಯತೆಗೆ ಒತ್ತು ನೀಡಲು ಬಯಸುತ್ತೇವೆ ಎಂದು ಆರೆಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ಹೇಳಿದ್ದಾರೆ. ಕಿರುಚಿತ್ರ ಜನರನ್ನು ಮುಟ್ಟುವ ಮಾಧ್ಯಮವಾಗಿದೆ. ಅದರ ಮೂಲಕ ಸಾಮಾಜಿಕ ಮತ್ತು ರಾಷ್ಟ್ರೀಯ ಜಾಗೃತಿ ಮೂಡಿಸಲು ಸಾಧ್ಯವಿದೆಯೆಂದು ನಾನು ಭಾವಿಸುತ್ತೇನೆ.
ಇಂದಿನ ಸಿನೆಮಾಗಳಿಂದ ಭಾರತೀಯತೆಗೆ ಹಾನಿಯಾಗುತ್ತಿದೆ ಆದ್ದರಿಂದ ಯುವಕರು ಅಲೆದಾಡುವ ಸ್ಥಿತಿಯಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಯುವಕರನ್ನುಸರಿಯಾದ ದಾರಿಯಲ್ಲಿ ಹೆಜ್ಜೆ ಇಡುವಂತೆ ಮಾಡುವ ಅಗತ್ಯವಿದೆ. ನಮ್ಮ ಈ ಹೊಸ ಹೆಜ್ಜೆಯಿಂದ ದೇಶದ ಯುವಕರಲ್ಲಿ ಸಾಮಾಜಿಕ ಪರಿವರ್ತನೆಯ ಭಾವನೆ ಹುಟ್ಟಲಿದೆ.
ಈ ಉತ್ಸವವನ್ನು ದೇಶದ ಹಲವು ರಾಜ್ಯಗಳಲ್ಲಿ ನಡೆಸಲಾಗುವುದು. ಈ ತಿಂಗಳು ಅಸ್ಸಾಮ್, ಕೇರಳ , ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ಆಯೋಜಿಸಲಿದೆ ಎಂದು ವೈದ್ಯತಿಳಿಸಿದ್ದಾರೆ. ಈ ಯೋಜನೆಯಲ್ಲಿ ಭಾಗವಹಿಸಲಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಟ್ರಸ್ಟ್‌ಕೂಡಾ ರೂಪಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮನುಷ್ ಚಾಯ ಎನ್ನುವ ಟೈಟಲ್‌ನಲ್ಲಿ ಉತ್ಸವ ನಡೆಯಲಿದೆ.