×
Ad

ಫೋನ್‌ನಲ್ಲಿ ಆಶ್ಲೀಲ ಸಂಭಾಷಣೆ: ಪ್ರಶ್ನಿಸಿದ ಗೃಹಿಣಿಗೆ ನಡುರಸ್ತೆಯಲ್ಲೇ ಪೆಟ್ಟು!

Update: 2017-03-02 17:25 IST

ಆಡೂರ್,ಮಾ.2: ಟೆಲಿಫೋನ್ ಮೂಲಕ ಅಶ್ಲೀಲವಾಗಿ ಮಾತಾಡಿದ್ದನ್ನು ಪ್ರಶ್ನಿಸಿದ ಗೃಹಿಣಿಗೆ ನಡುರಸ್ತೆಯಲ್ಲೇ ಮೂವರ ತಂಡವೊಂದು ಥಳಿಸಿದೆ. ಆಡೂರ್ ಪಯಕ್ಕುಳತ್ತ್ ಮಂಗಳವಾರ ಸಂಜೆ ಘಟನೆ ನಡೆದಿದೆ. ಮೂರು ತಿಂಗಳಿಂದ ಪಯಕ್ಕುಳಂ ಎಂಬಲ್ಲಿನ ಅಶ್ರಫ್ ಎಂಬಾತ ಗೃಹಿಣಿಗೆ ಫೋನ್ ಮೂಲಕ ಕೀಟಲೆ ನೀಡುತ್ತಿದ್ದ ಎನ್ನಲಾಗಿದೆ.

ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಆರೋಪಿ ಕಿರುಕುಳವನ್ನು ಮುಂದುವರಿಸಿದ್ದಾನೆ. ಯುವತಿಯ ಪತಿ ವಿದೇಶದಲ್ಲಿದ್ದಾರೆ. ಅಶ್ರಫ್‌ಗೆ ಫೋನ್ ಮಾಡಿ ಕಿರುಕುಳ ನೀಡಬಾರದೆಂದು ಗೃಹಿಣಿಯ ಪತಿಯೂ ಹೇಳಿದ್ದರು. ಆದರೆ ಆರೋಪಿ ಫೋನ್‌ನಲ್ಲಿ ಕೀಟಲೆ ನಿಡಿದ್ದಲ್ಲದೆ. ಇವರ ಮನೆಯ ಮುಂದಿನ ವಿದ್ಯುತ್ ಬಲ್ಬ್‌ಗಳನ್ನು ರಾತ್ರಿ ಕಿತ್ತುಕೊಂಡು ಹೋಗಿದ್ದಾನೆ. ಗೃಹಿಣಿ ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ. ಜೊತೆಗೆ ಆಕೆಯೊಂದಿಗೆ ಮಾತಾಡಿದ್ದನ್ನು ರಿಕಾರ್ಡ್ ಮಾಡಿ ಬೇರೆಯವರಿಗೆ ಕೇಳಿಸುತ್ತೇನೆ.

ಇಲ್ಲದಿದ್ದರೆ ತಾನು ಕರೆಯುವಲ್ಲಿಗೆ ಬರಬೇಕೆಂದು ಬ್ಲಾಕ್‌ಮೈಲ್ ಕೂಡಾ ಮಾಡಿದ್ದ ಎನ್ನಲಾಗಿದೆ.ಮಂಗಳವಾರ ಪೊಲೀಸ್‌ಠಾಣೆಯಲ್ಲಿ ದೂರು ನೀಡಲು ಹೊರಟಾಗ ಪತಿ ದೂರು ನೀಡುವುದು ಬೇಡ ಹೇಳಿದ್ದರಿಂದ ಗೃಹಿಣಿ ದೂರು ನೀಡಿರಲಿಲ್ಲ.

ಇದರ ನಂತರ ಸಂಜೆ ಕುಟುಂಬದ ಮನೆಯಿಂದ ಮಗುವನ್ನು ಕರೆದುಕೊಂಡು ಹೋಗಲು ಹೋಗಿದ್ದಾಗ ಟಿಪ್ಪರ್ ಲಾರಿಯಲ್ಲಿ ಬಂದ ಆರೋಪಿ ಅಶ್ರಪ್ ಅದನ್ನು ನಿಲ್ಲಿಸಿ ಗೃಹಿಣಿಗೆ ಹೊಡೆದಿದ್ದಾನೆ.ಕೈಹಿಡಿದಿದ್ದಾನೆ. ನೈಟಿಯನ್ನು ಹರಿದಿದ್ದಾನೆ.

ಈ ವೇಳೆ ಅಶ್ರಫ್‌ನ ಜೊತೆ ಇಬ್ಬರು ಗೆಳೆಯರು ಕೂಡಾ ಇದ್ದರು. ಗಲಾಟೆ ಕೇಳಿ ಊರವರು ಓಡಿ ಬಂದು ಗೃಹಿಣಿಯನ್ನು ತಂಡದ ಕೈಯಿಂದ ರಕ್ಷಿಸಿ ಆಡೂರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಡೂರ್ ಪೊಲೀಸರು ಗೃಹಿಣಿಯಿಂದ ಸಾಕ್ಷ್ಯವನ್ನು ದಾಖಲಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News