×
Ad

ಮೋಹನ್‌ಲಾಲ್ ಹ್ಯಾಟ್ರಿಕ್

Update: 2017-03-04 12:40 IST

ಲಯಾಳಂ ಚಿತ್ರರಂಗದಲ್ಲಿ ಮೋಹನ್‌ಲಾಲ್ ಮ್ಯಾಜಿಕ್ ಮುಂದುವರಿದಿದೆ. ‘ಒಪ್ಪಂ’ ಹಾಗೂ ‘ಪುಲಿಮುರುಗನ್’ ಚಿತ್ರಗಳ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ, ಅವರ ಅಭಿನಯದ ‘ಮುಂದಿರಿ ವಳ್ಳಿಕಳ್ ತಳಿರ್ಕುಂಬೋಳ್’ ಜಯಭೇರಿ ಬಾರಿಸಿದ್ದು 50 ಕೋಟಿ ರೂ. ಕ್ಲಬ್‌ಗೆ ಸೇರಿಕೊಂಡಿದೆ. ಈ ಮೂರು ಚಿತ್ರಗಳ ಅಭೂತಪೂರ್ವ ಯಶಸ್ಸಿನೊಂದಿಗೆ ಮೋಹನ್‌ಲಾಲ್ ಹ್ಯಾಟ್ರಿಕ್ ಸಾಧಿಸಿದ್ದಾರೆ..

ಮೋಹನ್‌ಲಾಲ್ ಅಭಿನಯದ ಪುಲಿಮುರುಗನ್ 100 ಕೋಟಿ ರೂ. ಗಳಿಸುವ ಮೂಲಕ, ಮಲಯಾಳಂ ಚಿತ್ರರಂಗದಲ್ಲೇ ಅತ್ಯಧಿಕ ಗಳಿಕೆಯ ಚಿತ್ರವೆಂಬ ದಾಖಲೆ ಬರೆದಿತ್ತು.

‘‘ಮುಂದಿರಿ ವಳ್ಳಿಗಲ್....’’ಗೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಭಾರತದಲ್ಲಿ ಈ ಚಿತ್ರ ಬರೋಬ್ಬರಿ 38 ಕೋಟಿ ರೂ. ಸಂಪಾದಿಸಿದ್ದರೆ, ವಿದೇಶದಲ್ಲಿ ಈ ತನಕ 12 ಕೋಟಿ ರೂ. ಗಳಿಸುವಲ್ಲಿ ಸಫಲವಾಗಿದೆ. ನವಿರಾದ ಕೌಟುಂಬಿಕ ಪ್ರೇಮಕಥೆಯಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮೀನಾ ಅಭಿನಯಿಸಿದ್ದಾರೆ. ‘ದೃಶ್ಯಂ’ ಬಳಿಕ ಈ ತಾರಾಜೋಡಿ ಜೊತೆಯಾಗಿ ನಟಿಸಿದ ಚಿತ್ರ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News