×
Ad

ಉತ್ತರ ಪ್ರದೇಶದಲ್ಲಿ ಶೇ.57.03, ಮಣಿಪುರದಲ್ಲಿ ಶೇ.82 ಮತದಾನ

Update: 2017-03-04 20:57 IST

ಹೊಸದಿಲ್ಲಿ,ಮಾ.4: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತ್ತು ಮಣಿಪುರ ವಿಧಾನಸಭೆಗಾಗಿ ಮೊದಲ ಹಂತದ ಮತದಾನ ಶನಿವಾರ ಶಾಂತಿಯುತವಾಗಿ ನಡೆದಿವೆ. ಉ.ಪ್ರದೇಶದಲ್ಲಿ ಶೇ.57.03 ಮತದಾನವಾಗಿದ್ದರೆ, ಮಣಿಪುರದಲ್ಲಿ ಶೇ.82ರಷ್ಟು ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.
ಉ.ಪ್ರದೇಶದಲ್ಲಿ ಎಸ್‌ಪಿ ಪೋಷಕ ಮುಲಾಯಂ ಸಿಂಗ ಯಾದವ ಅವರು ಪ್ರತಿನಿಧಿಸುತ್ತಿದ್ದ ಅಜಮ್‌ಗಡ, ಬಿಜೆಪಿ ನಾಯಕ ಯೋಗಿ ಆದಿತ್ಯನಾಥ ಮತ್ತು ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಮಾವು ಕ್ಷೇತ್ರಗಳು ಎಲ್ಲರ ಗಮನ ಸೆಳೆದಿವೆ.
ಏಳು ಜಿಲ್ಲೆಗಳ 49 ವಿದಾನಸಭಾ ಕ್ಷೇತ್ರಗಳಲ್ಲಿ ನಡೆದ ಆರನೇ ಹಂತದ ಮತದಾನದಲ್ಲಿ 635 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಿದೆ.
ಅತ್ತ ಮಣಿಪುರದಲ್ಲಿ ಮೊದಲ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಏಳು ಮಹಿಳೆಯರು ಸೇರಿದಂತೆ 168 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಿದ್ದಾರೆ.
1643 ಮತಗಟ್ಟೆಗಳಲ್ಲಿ ಭದ್ರತೆಗಾಗಿ 8,400ಕ್ಕೂ ಅಧಿಕ ಸಿಆರ್‌ಪಿಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಪೊಲೀಸ್ ಅಥವಾ ರಾಜ್ಯ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News