ಅಲೆಪ್ಪೊ: ಭೀಕರ ಕಾಳಗ; 30 ಸಾವಿರ ನಾಗರಿಕರ ಪಲಾಯನ

Update: 2017-03-04 16:50 GMT

ಬೈರೂತ್, ಮಾ.4: ರಶ್ಯ ವಯುಪಡೆಯ ಬೆಂಬಲದೊಂದಿಗೆ ಉತ್ತರ ಸಿರಿಯದಲ್ಲಿ ಐಸಿಸ್ ವಿರುದ್ಧ ಭೀಕರ ಕಾಳಗದಲ್ಲಿ ತೊಡಗಿರುವ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಸೇನಾಪಡೆಗಳು ಮುನ್ನಡೆ ಸಾಧಿಸುತ್ತಿರುವಂತೆಯೇ, ಸಹಸ್ರಾರು ಸಿರಿಯನ್ ನಾಗರಿಕರು ಜೀವಭಯದಿಂದ ಮನೆಮಾರು ತೊರೆದು ಪಲಾಯನಗೈಯುತ್ತಿದ್ದಾರೆಂದು ಕಣ್ಗಾವಲು ಸಂಸ್ಥೆಯೊಂದು ಶನಿವಾರ ವರದಿ ಮಾಡಿದೆ.

  ಅಲೆಪ್ಪೊ ಪ್ರಾಂತದಲ್ಲಿ ಪಲಾಯನಗೈದ 30 ಸಾವಿರಕ್ಕೂ ಅಧಿಕ ನಾಗರಿಕರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ‘ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ’ ಸಂಸ್ತೆಯ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News