ಸಿಪಿಎಂ ಕಾರ್ಯಕರ್ತರಿಂದ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿ, ಐವರಿಗೆ ಗಾಯ
Update: 2017-03-05 14:16 IST
ಕೊಝಿಕೊಡ್,ಮಾ.5: ಜಿಲ್ಲೆಯ ಕೊಯಿಲಾಂಡಿ ಬಳಿ ನಿನ್ನೆ ರಾತ್ರಿ ಸಿಪಿಎಂ ಕಾರ್ಯಕರ್ತರು ಎನ್ನಲಾದ ಗುಂಪೊಂದು ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರು ಮತ್ತು ಓರ್ವ ಬಿಜೆಪಿ ಕಾರ್ಯಕರ್ತ ಗಾಯಗೊಂಡಿದ್ದು, ಅವರನ್ನು ಇಲ್ಲಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೀಳೈಯುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳೆಲ್ಲ 20ರ ಹರೆಯದವರಾಗಿದ್ದಾರೆ ಎಂದು ಪೊಲೀಸರು ರವಿವಾರ ಇಲ್ಲಿ ತಿಳಿಸಿದರು.
ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.