ನೋಟು ರದ್ದತಿಯ ಬಗ್ಗೆ ಅರುಣ್ ಜೇಟ್ಲಿಗೆ ಗೊತ್ತಿತ್ತೇ?
ಹೊಸದಿಲ್ಲಿ,ಮಾ.5: 2016,ನ.8ರಂದು ಪ್ರಧಾನಿ ನರೇಂದ್‌ರ ಮೋದಿಯವರು ನೋಟು ರದ್ದತಿಯನು ಪ್ರಕಟಿಸುವ ಮೊದಲು ಆ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿಯವರೊಂದಿಗೆ ಸಮಾಲೋಚಿಸಲಾಗಿತ್ತೇ ಎನುವುದನ್ನು ಬಹರಂಗಗೊಳಿಸಲು ವಿತ್ತ ಸಚಿವಲಯವು ನಿರಾಕರಿಸಿದೆ.
ಈ ಹಿಂದೆ ನೋಟು ರದ್ದತಿಗೆ ಮುನ್ನ ವಿತ್ತ ಸಚಿವರು ಮತ್ತು ಮುಖ್ಯ ಹಣಕಾಸು ಸಲಹೆಗಾರರ ಜೊತೆ ಸಮಾಲೋಚಿಸಲಾಗಿತ್ತೇ ಎಂಬ ಪ್ರಶ್ನೆಯು ಮಾಹಿತಿ ಹಕ್ಕು (ಆರ್‌ಟಿಐ)ಕಾಯ್ದೆಯಲ್ಲಿನ ‘ಮಾಹಿತಿ ’ವ್ಯಾಖ್ಯೆಯಡಿ ಬರುವುದಿಲ್ಲ ಎಂದು ಪ್ರಧಾನಿ ಕಚೇರಿ ಮತ್ತು ಆರ್‌ಬಿಐ ಹೇಳಿದ್ದವು.
ಆರ್‌ಟಿಐ ಕಾಯ್ದೆಯಲ್ಲಿ ಮಾಹಿತಿಯನ್ನು ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದಲ್ಲಿರುವ ‘ಯಾವುದೇ ರೂಪದಲ್ಲಿರುವ ಯಾವುಇದೇ ಸಾಮಗ್ರಿ ’ಎಂದು ವ್ಯಾಖ್ಯಾನಿಸಲಾಗಿದೆ.
ಪಿಟಿಐ ಕೇಳಿದ್ದ ಪ್ರಶ್ನೆಗೆ ವಿತ್ತ ಸಚಿವಾಲಯದ ಉತ್ತರವು ಪ್ರಶ್ನೆಗೆ ಸಂಬಂಧಿಸಿದ ದಾಖಲೆಗಳಿವೆ,ಆದರೆ ಅದನ್ನು ಆರ್‌ಟಿಐ ಕಾತ್ದೆಯಡಿ ಬಹಿರಂಗ ಪಡಿಸುವಂತಿಲ್ಲ ಎಂದು ಒಪ್ಪಿಕೊಂಡಿರುವುದರಿಂದ ಮಹತ್ವವನ್ನು ಪಡೆದುಕೊಮಡಿದೆ.
ಸಚಿವಾಲಯವು ಮಾಹಿತಿ ನಿರಾಕಣೆಗೆ ಆರ್‌ಟಿಐ ಕಾತ್ದೆಯಡಿಯ ವಿನಾಯಿತಿ ನಿಬಂಧನೆಯನ್ನು ಉಲ್ಲೇಖಿಸಿದೆ,ಆದರೆ ಕೋರಲಾದ ಮಾಹಿತಿಗೆ ಈ ನಿಬಂಧನೆ ಹೇಗೆ ಅನ್ವಯವುತ್ತದೆ ಎನ್ನುವುದಕ್ಕೆ ಯಾವುದೇ ಕಾರಣವನ್ನು ನಿಡಿಲ್ಲ.
ಭಾರತದ ಸಾರ್ವಭಮತೆ ಮತ್ತು ಅಖಂಡತೆ,ಭದ್ರತೆ,ವ್ಯೆಹಾತ್ಮಕ-ವೈಜ್ಞಾನಿಕ-ಆರ್ಥಿಕ ಹಿತಾಸಕ್ತಿಗಳು ಮತ್ತು ವಿದೇಶಗಳೊಂದಿಗಿನ ಸಂಬಂಧಗಳಿಗೆ ಹಾನಿಯನ್ನುಂಟು ಮಾಡುವ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವ ಯಾವುದೇ ಮಾಹಿತಿಯನ್ನು ತಡೆಹಿಡಿಯಲು ಈ ನಿಬಂಧನೆಯು ಅವಕಾಶ ಕಲ್ಪಿಸಿದೆ.
ನೋಟು ಅಮಾನ್ಯ ಕ್ರಮಕ್ಕೆ ನೇರವಾಗಿ ಸಂಬಂಧಿಸಿರುವ ಮೂರು ಮುಖ್ಯ ಸಂಸ್ಥೆಗಳಾದ ಪ್ರಧಾನಿ ಕಚೇರಿ,ಆರ್‌ಬಿಐ ಈ ದಿಢೀರ್ ಕ್ರಮದ ಕುರಿತು ನಮಾಹಿತಿಗಳನ್ನು ಬಹಿರಂಗಗೊಳಿಸಲು ಮೊದಲೇ ರಾಕರಿಸಿದ್ದು,ಇದೀಗ ಈ ಸಾಲಿಗೆ ವಿತ್ತ ಸಚಿವಾಲಯವು ಸೇರ್ಪಡೆಗೊಂಡಿದೆ.