ದೇಶದ 91 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.41ರಷ್ಟು ಕುಸಿತ: ಕೇಂದ್ರ

Update: 2017-03-07 14:24 GMT

ಹೊಸದಿಲ್ಲಿ,ಮಾ.7: ದೇಶದ 91 ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವು ಅವುಗಳ ಒಟ್ಟು ಸಾಮರ್ಥ್ಯದ ಶೇ.41ಕ್ಕೆ ಕುಸಿದಿದೆ ಎಂದು ಕೇಂದ್ರವು ಮಂಗಳವಾರ ತಿಳಿಸಿದೆ.

  ಮಾ.2ಕ್ಕೆ ಕೊನೆಗೊಂಡ ವಾರಕ್ಕೆ ಇದ್ದಂತೆ ಈ ಜಲಾಶಯಗಳಲ್ಲಿ 64.55 ಮಿಲಿಯನ್ ಕ್ಯುಬಿಕ್ ಮೀಟರ್(ಬಿಸಿಎಂ) ನೀರು ಸಂಗ್ರಹವಿತ್ತು ಎಂದು ಕೇಂದ್ರ ಜಲ ಸಂಪನ್ಮೂಲಗಳ ಸಚಿವಾಲಯವು ತಿಳಿಸಿದೆ.

 157.799 ಬಿಸಿಎಂ ಒಟ್ಟು ಸಾಮರ್ಥ್ಯದ ಈ ಜಲಾಶಯಗಳಲ್ಲಿ ಫೆ.23ರಂದು ನೀರನ ಮಟ್ಟ ಶೇ.44ರಷ್ಟಿತ್ತು.

 ಹಿಮಾಚಲ ಪ್ರದೇಶ, ತ್ರಿಪುರಾ, ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಇವು ಕಳೆದ ವರ್ಷಕ್ಕ ಹೋಲಿಸಿದರೆ ಕಡಿಮೆ ನೀರಿನ ಸಂಗ್ರಹ ಹೊಂದಿರುವ ರಾಜ್ಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News