×
Ad

ಚತ್ತೀಸ್‌ಗಡ: 3 ವರ್ಷಗಳಲ್ಲಿ 252 ರೈತರ ಆತ್ಮಹತ್ಯೆ

Update: 2017-03-07 20:20 IST

ರಾಯ್‌ಪುರ(ಚತ್ತೀಸ್‌ಗಢ), ಮಾ.7: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 252 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದಜು ಚತ್ತೀಸ್‌ಗಡ ಸರಕಾರವು ಮಂಗಳವಾರ ವಿಧಾನಸಭೆಗೆ ತಿಳಿಸಿದೆ.

 ಕಂದಾಯ ಸಚಿವ ಪ್ರೇಮ್‌ಪ್ರಕಾಶ್ ಪಾಂಡೆ ಅವರು ಕಾಂಗ್ರೆಸ್ ಶಾಸಕ ಅಮರ್‌ಜೀತ್ ಭಾಗಟ್ ಅವರಿಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ, ‘‘ಜನವರಿ 1, 2014 ಹಾಗೂ 2016, ಡಿಸೆಂಬರ್ 31ರ ಮಧ್ಯೆ ಚತ್ತೀಸ್‌ಗಡದಾದ್ಯಂತ 252 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ತಿಳಿಸಿದ್ದಾರೆ.ಸುರ್ಗುಜಾ ಜಿಲ್ಲೆಯಲ್ಲಿ ಗರಿಷ್ಠ ರೈತ ಆತ್ಮಹತ್ಯೆ ಪಕರಣಗಳು ವರದಿಯಾಗಿದ್ದು, ಅಲ್ಲಿ 94 ಮಂದಿ ಸಾವಿಗೆ ಶರಣಾಗಿದ್ದಾರೆ. ಕಬೀರ್‌ಧಾಮ್(45), ಬೆಮೆತಾರಾ(33), ರಾಯ್‌ಘರ್ (20),ರಾಜಾನಂದ್‌ಗಾಂವ್ (17), ಜಂಜ್‌ಗಿರ್-ಚಂಪಾ (11), ಬಲೋಡ್ (9) ಹಾಗೂ ರಾಯ್‌ಪುರ್ (8) ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾದ ಇತರ ಜಿಲ್ಲೆಗಳೆಂದು ಸಚಿವರು ತಿಳಿಸಿದರು.

 ಇದೇ ಅವಧಿಯಲ್ಲಿ ಮಹಾಸುಮುಂಡ್ ಹಾಗೂ ಬಲೋಡಾಬಝಾರ್ ಜಿಲ್ಲೆಗಳಲ್ಲಿ ನಾಲ್ವರು ರೈತರು, ದುರ್ಗ್,ಬಸ್ತಾರ್ ಹಾಗೂ ಕೊಂಡಗಾಂವ್‌ನಲ್ಲಿ ತಲಾ ಓರ್ವ ರೈತ ಸಾವಿಗೆ ಶರಣಾಗಿದ್ದಾರೆಂದು ಸಚಿವ ಪ್ರೇಮ್ ಪ್ರಕಾಶ್ ಪಾಂಡೆ ತಿಳಿಸಿದರು.

ಆತ್ಮಹತ್ಯೆಗೈದ 17 ರೈತರ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಲಾಗಿದೆಯೆಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News