×
Ad

ಪುಲ್ವಾಮದಲ್ಲಿ ಎನ್ ಕೌಂಟರ್ ; ಇಬ್ಬರು ಉಗ್ರರ ಹತ್ಯೆ

Update: 2017-03-09 12:41 IST

ಶ್ರೀನಗರ, ಫೆ.9: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ  ಪಡ್ಗಾಂಪೂರಾದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಶಂಕಿತ ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

ಜೆಹಾಂಗಿರ್ ಗನಾಯ್ ಮತ್ತು ಮುಹಮ್ಮದ್ ಶಾಫಿ  ಅಲಿಯಾಸ್ ಷೇರ್ ಗುಜ್ರಿ ಎಂಬವರು ಎನ್ಕೌಂಟರ್ ಗೆ ಬಲಿಯಾಗಿದ್ದಾರೆ. ಮೃತ ಉಗ್ರರು ಲಷ್ಕರ್-ಎ-ತೋಯ್ಬಾ ಸಂಘಟನೆಗೆ ಸೇರದವರೆಂದು ತಿಳಿದು ಬಂದಿದೆ.

ಕೋಯಿಲ್ ಗ್ರಾಮದ ನಿವಾಸಿಗಳಾದ ಜೆಹಾಂಗಿರ್ ಮತ್ತು ಮುಹಮ್ಮದ್ ಶಾಫಿ  ಕಳೆದ ವರ್ಷ ಪೊಲೀಸರೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೂವರು ಉಗ್ರರು ಅಡಗಿಕೊಂಡಿರುವ ಖಚಿತ ವರ್ತಮಾನದ ಮೇರೆಗೆ ಸಿಆರ್ ಪಿಎಫ್ ಮತ್ತು  ವಿಶೇಷ ಕಾರ್ಯಾಚರಣೆ ಗ್ರೂಪ್ (ಎಸ್ ಒಜಿ)  ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಡಗಕೊಂಡಿರುವ ಉಗ್ರನ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News