ತಂಗಿಯ ಮದುವೆಗೆ ಹಣ ಹೊಂದಿಸಲಾಗದ್ದಕ್ಕೆ ತಂಗಿಯನ್ನೇ ಕೊಂದು ಬಿಟ್ಟ !
ಹೊಸದಿಲ್ಲಿ, ಮಾ.9: ತನ್ನ ತಂಗಿಯ ಮದುವೆಗೆ ಹಣ ಹೊಂದಿಸಲಾಗಲಿಲ್ಲವೆಂಬ ಕಾರಣಕ್ಕೆ 25 ವರ್ಷದ ಯುವಕನೊಬ್ಬ ಆಕೆಯನ್ನೇ ಕೊಂದು ಬಿಟ್ಟ ಘಟನೆ ಮಂಗಳವಾರ ಪತಪರ್ಗಂಜ್ ಇಲ್ಲಿನ ಹಸನಪುರ ಗ್ರಾಮದಿಂದ ವರದಿಯಾಗಿದೆ. ಮೃತ ಯುವತಿಯನ್ನು 19 ವರ್ಷದ ಲಲಿತಾ ಎಂದು ಗುರುತಿಸಲಾಗಿದೆ. ಆಕೆಯ ಮೃತದೇಹ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಪತ್ತೆಯಾಗಿತ್ತು. ಆಕೆಯ ಕುತ್ತಿಗೆಯ ಸುತ್ತಲೂ ಗಾಯದ ಗುರುತುಗಳಿದ್ದವು.
ತನ್ನ ಸೋದರ ಸಂಬಂಧಿ ಯುವಕನೊಂದಿಗೆ ಆಕೆ ಮನೆಯಲ್ಲಿದ್ದಳು ಎಂದು ತಿಳಿದು ಬಂದಿದ್ದರೂ ತಾನು ಮನೆಯಲ್ಲಿರಲಿಲ್ಲ ಎಂದು ಹೇಳಿ ತಪಸ್ ಬರ್ಮನ್ ಎಂಬ ಆ ಆರೋಪಿ ಯುವಕ ಹೇಳಿ ಆರಂಭದಲ್ಲಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ನಂತರ ವಿಚಾರಣೆಯ ವೇಳೆಗೆ ಲಲಿತಾ ತನ್ನ ಕುಟುಂಬದೊಂದಿಗೆ ಆಕೆ 10 ವರ್ಷದವಳಿರುವಾಗಿನಿಂದ ವಾಸವಾಗಿದ್ದಳು. ಮನೆಯಲ್ಲಿ ಆಕೆಯ ವಿವಾಹದ ವಿಚಾರವಾಗಿ ನಡೆಯುತ್ತಿದ್ದ ನಿತ್ಯ ಜಗಳ ಹಾಗೂ ಮದುವೆಗಾಗಿ ಸಾಕಷ್ಟು ಹಣವಿಲ್ಲದೇ ಹೋಗಿರುವುದರಿಂದ ಬೇಸತ್ತು ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಹೇಳಿದ್ದ.
ಸೋಮವಾರ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ ರೇಡಿಯೊ ಗಟ್ಟಿಯಾಗಿ ಇಟ್ಟು ಲಲಿತಾ ಕೂಗು ಯಾರಿಗೂ ಕೇಳದಿರುವಂತೆ ಮಾಡಿ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಲಲಿತಾ ತಂದೆ ಸಾವಿಗೀಡಾಗಿದಂದಿನಿಂದ ತಪಸ್ ಕುಟುಂಬ ಆಕೆಯನ್ನು ನೋಡಿಕೊಳ್ಳುತ್ತಿತ್ತು ಎಂದು ತಿಳಿದು ಬಂದಿದೆ.