ಹೊಸ 10 ರೂ.ನೋಟು ಶೀಘ್ರ ಬಿಡುಗಡೆ
Update: 2017-03-09 14:40 IST
ಮುಂಬೈ,ಮಾ.9: ಆರ್‌ಬಿಐ ಹೆಚ್ಚಿನ ಭದ್ರತಾ ಲಕ್ಷಣಗಳನ್ನು ಹೊಂದಿರುವ ಹೊಸ 10 ರೂ.ನೋಟನ್ನು ಶೀಘ್ರವೇ ಬಿಡುಗಡೆಗೊಳಿಸಲಿದೆ.
ಮಹಾತ್ಮಾ ಗಾಂಧಿ ಸರಣಿ-2005ರ ನೋಟುಗಳು ಎರಡೂ ನಂಬರ್ ಪ್ಯಾನೆಲ್‌ಗಳಲ್ಲಿ ಇಂಗ್ಲೀಷ್‌ನ ‘ಎಲ್’ಅಕ್ಷರವನ್ನು ಮತ್ತು ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯನ್ನು ಹೊಂದಿರುತ್ತದೆ ಎಂದು ಆರ್‌ಬಿಐ ಗುರುವಾರ ಹೇಳಿದೆ.
ಮುದ್ರಣ ವರ್ಷ 2017 ನೋಟಿನ ಹಿಂಬದಿಯಲ್ಲಿರಲಿದೆ. ಎರಡೂ ಪ್ಯಾನೆಲ್‌ಗಳಲ್ಲಿಯ ಅಂಕಿಗಳು ಎಡದಿಂದ ಬಲಕ್ಕೆ ಗಾತ್ರದಲ್ಲಿ ಹಿರಿದಾಗುವುದು ಸೇರಿದಂತೆ ಇತರ ಭದ್ರತಾ ಲಕ್ಷಣಗಳು ನೋಟಿನಲ್ಲಿರುತ್ತವೆ. ನೋಟಿನ ಸೀರಿಯಲ್ ಸಂಖ್ಯೆಯ ಹಿಂದಿರುವ ಮೂರು ಚಿಹ್ನೆ (ಅಕ್ಷರ ಮತ್ತು ಸಂಖ್ಯೆ)ಗಳು ಒಂದೇ ಗಾತ್ರದಲ್ಲಿರಲಿವೆ.
ಹೊಸನೋಟಿನ ಜೊತೆಗೆ ಹಾಲಿ ಚಲಾವಣೆಯಲ್ಲಿರುವ 10 ರೂ.ಗಳು ನೋಟುಗಳು ಮುಂದುವರಿಯುತ್ತವೆ ಎಂದು ಆರ್‌ಬಿಐ ತಿಳಿಸಿದೆ.