ಶಿವಸೇನೆಯ ನೈತಿಕ ಗೂಂಡಾಗಿರಿಯನ್ನು ವಿರೋಧಿಸಿ ಮರೈನ್ ಡ್ರೈವ್‌ನಲ್ಲಿ ಇಂದು 4 ಗಂಟೆಗೆ ಚುಂಬನ ಪ್ರತಿಭಟನೆ!
Update: 2017-03-09 15:23 IST
ಕೊಚ್ಚಿ,ಮಾ.9: ಇಲ್ಲಿನ ಮರೈನ್ ಡ್ರೈವ್‌ನಲ್ಲಿ ಶಿವಸೇನೆ ನೈತಿಕ ಗೂಂಡಾಗಿರಿ ನಡೆಸಿದ್ದು, ಇದನ್ನು ಪ್ರತಿಭಟಿಸಿ ಕೊಚ್ಚಿಯಲ್ಲಿ ಚುಂಬನ ಸಮರ ನಡೆಸಲು ಕರೆ ನೀಡಲಾಗಿದೆ.
ಕಿಸ್ ಆಫ್ ಲೌವ್ ಕಾರ್ಯಕರ್ತರು ಚುಂಬನ ಸಮರಕ್ಕೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಕರೆ ನೀಡಿದ್ದಾರೆ. ಇಂದು ಸಂಜೆ ನಾಲ್ಕು ಗಂಡೆಗೆ ಮರೈನ್ ಡ್ರೈವ್‌ನಲ್ಲಿ ಚುಂಬನದ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಬುಧವಾರ ಸಂಜೆ ಪೊಲೀಸರು ನೋಡುತ್ತಿದ್ದಂತೆ ಮರೈನ್ ಡ್ರೈವ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುವಕರು ಮತ್ತು ಯುವತಿಯರನ್ನು ಕೇರಳದ ಶಿವಸೇನೆ ಕಾರ್ಯಕರ್ತರು ಪೊರಕೆಯಿಂದ ದಾಳಿ ಮಾಡಿ ಓಡಿಸಿದ್ದರು. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.ಇಪ್ಪತ್ತು ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ವರದಿಯಾಗಿದೆ.