×
Ad

ಹೃತಿಕ್ ಚಿತ್ರಕ್ಕೆ ಕಬೀರ್‌ಖಾನ್ ನಿರ್ದೇಶನ

Update: 2017-03-11 19:09 IST

ಬಜರಂಗಿ ಭಾಯ್‌ಜಾನ್ ಖ್ಯಾತಿಯ ಕಬೀರ್ ಖಾನ್, ಇದೇ ಮೊದಲ ಬಾರಿಗೆ ಹೃತಿಕ್ ರೋಶನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆ್ಯಕ್ಷನ್-ರೋಮಾನ್ಸ್ ಕಥೆಯನ್ನು ಹೊಂದಿರುವ ಈ ಚಿತ್ರ ಭಾರೀ ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿದೆ.

ಪ್ರಸ್ತುತ ಕಬೀರ್‌ಖಾನ್, ಸಲ್ಮಾನ್ ಅಭಿನಯದ ಟ್ಯೂಬ್‌ಲೈಟ್ ಚಿತ್ರದ ಅಂತಿಮಹಂತದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಭರ್ಜರಿ ಯಶಸ್ಸು ಕಂಡ ‘ಕಾಬಿಲ್’ ಚಿತ್ರದ ಆನಂತರ ಹೃತಿಕ್ ಈ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಆದರೆ ಹೀರೋಯಿನ್ ಯಾರೆಂಬುದು ಮಾತ್ರ ಇನ್ನೂ ಕೂಡಾ ನಿರ್ಧಾರವಾಗಿಲ್ಲವಂತೆ.

ಸೆಪ್ಟಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದ್ದು, ಬಹುತೇಕ ಭಾಗ ವಿದೇಶಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಇದರ ಜೊತೆಗೆ ಹೃತಿಕ್, ತಂದೆ ರಾಕೆೇಶ್ ರೋಶನ್ ನಿರ್ದೇಶನದ ಕೃಷ್ 4ರಲ್ಲಿಯೂ ಅಭಿನಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News