ಛಿದ್ರವಾದ ಕಾಂಗ್ರೆಸ್ ಭದ್ರಕೋಟೆ ಅಮೇಠಿ

Update: 2017-03-11 17:47 GMT

ಲಕ್ನೋ,ಮಾ.11: ನೆಹರೂ-ಗಾಂಧಿ ಕುಟುಂಬದ ಭದ್ರಕೋಟೆಯೆಂದೇ ಪರಿಗಣಿಸಲಾಗಿರುವ ಉತ್ತರಪ್ರದೇಶದ ಅಮೇಠಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸೋಲನುಭವಿಸಿದ್ದು, ಅವುಗಳಲ್ಲಿ ಮೂರು ಸ್ಥಾನಗಳು ಬಿಜೆಪಿಯ ಪಾಲಾಗಿದೆ.

 ಅಮೇಠಿ ಜಿಲ್ಲೆಯ ಗೌರಿಗಂಜ್ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ಹಾಲಿ ಶಾಸಕ ರಾಕೇಶ್ ಪ್ರತಾಪ್‌ಸಿಂಗ್ ಉಳಿಸಿಕೊಂಡಿದ್ದು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಮುಹಮ್ಮದ್ ನಯೀಮ್ ಅವರನ್ನು 26 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಮೈತ್ರಿಮಾಡಿಕೊಂಡಿದ್ದರೂ, ಕೆಲವು ಸ್ಥಾನಗಳಲ್ಲಿ ಆ ಪಕ್ಷಗಳ ಅಭ್ಯರ್ಥಿಗಳು ಪರಸ್ಪರರ ವಿರುದ್ಧ ಸ್ಪರ್ಧಿಸಿದ್ದರು.

ಅಮೇಠಿಯಲ್ಲಿ ಬಿಜೆಪಿ ಅಭ್ಯರ್ಥಿ ಗರೀಮಾಸಿಂಗ್ ತನ್ನ ನಿಕಟಸ್ಪರ್ಧಿ, ಸಮಾಜವಾದಿ ಪಕ್ಶದ ಕಕಳಂಕಿತ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಪರಾಭವಗೊಳಿಸಿದ್ದರೆ. ಗರಿಮಾಸಿಂಗ್‌ಗೆ 63,912 ಮತ ಹಾಗೂ ಗಾಯತ್ರಿ ಪ್ರಜಾಪತಿಗೆ 58,941 ಮತಗಳು ಲಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News