ಅಮೃತಸರ ಲೋಕಸಭಾ ಕ್ಷೇತ್ರದ ಉಪಚುನಾವಣೆ:ಕಾಂಗ್ರೆಸ್‌ಗೆ ಜಯ

Update: 2017-03-11 18:05 GMT

ಅಮೃತಸರ,ಮಾ.11: ಅಮೃತಸರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರ್ಜಿತ್ ಸಿಂಗ್ ಅಹುಜಾ ಅವರು ತನ್ನ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಮೋಹನ ಸಿಂಗ್ ಛಿನ್ನಾ ಅವರನ್ನು 1,99,189 ಮತಗಳ ಭಾರೀ ಅಂತರದೊಂದಿಗೆ ಸೋಲಿಸಿ ವಿಜಯಮಾಲೆ ಧರಿಸಿದ್ದಾರೆ. ಆಪ್‌ನ ಉಪಕಾರ್ ಸಿಂಗ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಅಹುಜಾಗೆ 5,08,153 ಮತ್ತು ಛಿನ್ನಾಗೆ 3,08,964 ಮತಗಳು ಲಭಿಸಿದ್ದರೆ,ಸಿಂಗ್‌ಗೆ 1,49,984 ಮತಗಳು ಬಿದ್ದಿವೆ. ಕಳೆದ ವರ್ಷ ಹರ್ಯಾಣದೊಂದಿಗಿನ ಜಲವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಕಾಂಗ್ರೆಸಿನ ಅಮರಿಂದರ್ ಸಿಂಗ್ ಅವರ ರಾಜೀನಾಮೆಯಿಂದ ಈ ಕ್ಷೇತ್ರವು ತೆರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News