ರಬ್ಬರ್ ಕೃಷಿಕ ಕಾಡಾನೆ ತುಳಿತಕ್ಕೆ ಬಲಿ
ಮಂಡೂರ್,ಮಾ. 12: ಪುದುಪ್ಪರಿಯಾರಂ ಚೆರುಮಲ ನೊಚ್ಚಿಪ್ಪುಳ್ಳಿಯ ರಬ್ಬರ್ ಬೆಳೆಯುವ ರೈತನನ್ನು ಕಾಡಾನೆ ತುಳಿದುಸಾಯಿಸಿದೆ. ಮೃತನನ್ನು ನೊಚ್ಚಿಪುಳ್ಳಿಯ ವರ್ಗಿಸ್ ಪುತ್ರ ಸೊಲಿಯಾನ(4)) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಏಳು ಗಂಟೆಗೆ ಘಟನೆ ನಡೆದಿದೆ. ಟ್ಯಾಪಿಂಗ್‌ಗೆಂದು ಸೋಲಿ ರಬ್ಬರ್ ತೋಟಕ್ಕೆ ಹೋಗಿದ್ದರು. ತೋಟದಲ್ಲಿ ದ್ದ ಕಾಡಾನೆಯನ್ನು ಸದ್ದು ಮಾಡಿ ಕಾಡಿಗೆ ಓಡಿಸಿದ್ದರು. ಟ್ಯಾಪಿಂಗ್ ಮುಗಿಸಿ ಮನೆಗೆ ಮರಳುವ ವೇಳೆ ಮರಳಿ ಬಂದ ಆನೆ ಸೊಲಿಯಾನನ್ನು ತುಳಿದು ಸಾಯಿಸಿದೆ.
ಘಟನೆಯ ನಂತರ ಊರವರು 2 ಗಂಟೆಗಳ ಕಾಲ ಪಾಲಕ್ಕಾಡ್, ಕಲ್ಲಿಕೋಟೆ ರಾಷ್ಟ್ರೀಯ ಹೆದ್ದಾರಿಗೆ ತಡೆಒಡ್ಡಿದ್ದರು. ಅರಣ್ಯ ರಕ್ಷಕರನ್ನು ಜನ ತಡೆಹಿಡಿದಿದ್ದರು. ಜಿಲ್ಲಾಧಿಕಾರಿಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಚರ್ಚೆ ನಡೆಸಿ ಕೊನೆಗೂ ಜನರನ್ನು ಹಿಂದಕ್ಕೆ ಹೋಗುವಂತೆ ಮಾಡಿದರು. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಞರಕ್ಕೋಟ್ ಚರ್ಚ್ ಸೆಮಿತ್ತೇರಿಯಲ್ಲಿ ಅದನ್ನು ಅಂತ್ಯಸಂಸ್ಕಾರ ನರವೇರಿಸಲಾಯಿತು ಎಂದು ವರದಿ ತಿಳಿಸಿದೆ.