‘ನೂತನ ಭಾರತ’ ಉದಯವಾಗುತ್ತಿದೆ:ಪ್ರಧಾನಿ
Update: 2017-03-12 16:16 IST
ಹೊಸದಿಲ್ಲಿ,ಮಾ.12: ‘ನೂತನ ಭಾರತ’ವು ಉದಯವಾಗುತ್ತಿದೆ ಮತ್ತು ಅದು ಅಭಿವೃದ್ಧಿಯ ದ್ಯೋತಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಹೇಳಿದರು. ಶಪಥವೊಂದನ್ನು ಕೈಗೊಳ್ಳುವಂತೆ ಮತ್ತು ನೂತನ ಭಾರತ ನಿರ್ಮಾಣದತ್ತ ತಮ್ಮ ಬದ್ಧತೆಯನ್ನು ತನ್ನ ನರೇಂದ್ರ ಮೋದಿ ಮೊಬೈಲ್ ಆ್ಯಪ್‌ನಲ್ಲಿ ವ್ಯಕ್ತಪಡಿಸುವಂತೆಯೂ ಅವರು ಜನರನ್ನು ಕೋರಿಕೊಂಡರು.
ನೂತನ ಭಾರತವು ಉದಯವಾಗುತ್ತಿದೆ ಮತ್ತು 125 ಕೋ.ಭಾರತೀಯರ ಶಕ್ತಿ ಮತ್ತು ಕೌಶಲ ಅದಕ್ಕೆ ಬಲವನ್ನು ತುಂಬಲಿದೆ. ಈ ಭಾರತವು ಅಭಿವೃದ್ಧಿಯ ದ್ಯೋತಕವಾಗಲಿದೆ ಎಂದು ಮೋದಿ ಟ್ವೀಟಿಸಿದ್ದಾರೆ.
2022ರಲ್ಲಿ ನಾವು ದೇಶದ 75ನೇ ಸ್ವಾತಂತ್ರೋತ್ಸವವನ್ನು ಆಚರಿಸುವಾಗ ಗಾಂಧೀಜಿ, ಸರ್ದಾರ್ ಪಟೇಲ್ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೆಮ್ಮೆ ಪಟ್ಟುಕೊಳ್ಳುವಂತಹ ಭಾರತವನ್ನು ನಾವು ನಿರ್ಮಿಸಬೇಕಿದೆ ಎಂದೂ ಅವರು ಟ್ವೀಟಿಸಿದ್ದಾರೆ.