×
Ad

ಕೇರಳ: ಮೂರು ಹೊಸ ಜಾತಿಯ ಪಕ್ಷಿಗಳ ಪತ್ತೆ

Update: 2017-03-13 14:41 IST

ಕೇಳಗಂ,ಮಾ.13: ಅರಣ್ಯ, ಅರಣ್ಯ ಜೀವಿ ಇಲಾಖೆ ಮತ್ತು ಮಲಬಾರ್ ನಾಚುರಲ್ ಹಿಸ್ಟರಿ ಸೊಸೈಟಿಯ ಮುಂದಾಳುತ್ವದಲ್ಲಿ ಆರಳಂ ಅರಣ್ಯಜೀವಿಧಾಮದಲ್ಲಿ ನಡೆಸಲಾದ 18 ಹಕ್ಕಿಗಳ ಸಮೀಕ್ಷೆಯಲ್ಲಿ ಹೊಸ ಮೂರು ಜಾತಿಯ ಹಕ್ಕಿಗಳು ಕಂಡು ಬಂದಿವೆ. ಚಾರಕಂಡನ್ ಬಂಟಿಂಗ್, ಪೊದಪೊಟ್ಟನ್, ಮಯಕೊಚ್ಚ ಮುಂತಾದ ಹೊಸ ಹಕ್ಕಿ ಜಾತಿಗಳು ಪತ್ತೆಯಾದವು ಎಂದು ವರದಿ ತಿಳಿಸಿದೆ.

ಅರಣ್ಯಜೀವಿ ಧಾಮಗಳಲ್ಲಿ ಈ ಹಿಂದೆ ಕಾಣಿಸಿಕೊಳ್ಳದ ಈ ಮೂರು ಜಾತಿಗಳು ಸಹಿತ 150 ಹಕ್ಕಿಗಳ ಜಾತಿಗಳನ್ನುಮೂರು ದಿವಸಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ. ಇಲ್ಲಿ ಒಟ್ಟು 244 ರೀತಿಯ ಪಕ್ಷಿಯಜಾತಿಗಳನ್ನು ಗುರುತಿಸಲಾಗಿದೆ ಎಂದು ವನ್ಯಜೀವಿ ಪಾಲಕ ವಿ. ಸಜಿಕುಮಾರ್ ತಿಳಿಸಿದ್ದಾರೆ.

 ಹಕ್ಕಿ ನಿರೀಕ್ಷಕರಾದ ಸತ್ಯನ್ ಮೇಪ್ಪಯೂರ್, ಮನೋಜ್ ಇರಿಟ್ಟಿ, ಸುಶಾಂತ್ ಮಡಪ್ಪುರಚ್ಚಾಲ್, ರವಿ ಪಾರಕ್ಕಲ್ ರೋಶನಾಥ್ ಮೊದಲಾದ ದಕ್ಷಿಣಾ ಭಾರತ ಮತ್ತು ಲಕ್ಷದ್ವೀಪದ 70 ರಷ್ಟು ಹಕ್ಕಿ ನಿರೀಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇವರು ಐದು ಕಡೆ ವಾಸವಿರುವ ಹಕ್ಕಿಗಳ ಲೆಕ್ಕವನ್ನು ಮಾಡಿದ್ದಾರೆ.ಸಮಾಪನ ಸಮಾರಂಭವನ್ನು ಸಿ. ಸಜಿಕುಮಾರ್ ಉದ್ಘಾಟಿಸಿದರು.ಸಹಾಯಕ ವನ್ಯಜೀವಿ ಪಾಲಕ ವಿ. ಮಧುಸೂಧನ್ ಸ್ವಾಗತಿಸಿದರು. ಅರಣ್ಯ ಪಾಲಕ ಶಾಜಹಾನ್ ವಂದಿಸಿದರು ಎಂದುವರದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News