ಎಸ್ಪಿ ಭೇಟಿ ಗೆ ಬಂದ ದಲಿತ ವಿದ್ಯಾರ್ಥಿನಿ ಬಂಧನ!
ಕೋಟ್ಟಯಂ,ಮಾ.14: ಜಿಲ್ಲಾ ಪೊಲೀಸ್ ಮುಖ್ಯಸ್ಥರು ತನಗೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಪ್ಲೇಕಾರ್ಡ್ ಹಿಡಿದು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ದಲಿತ ಸಂಶೋಧನಾ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರು ಭೇಟಿಯಾಗಲು ಅನುಮತಿನೀಡಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ವಿದ್ಯಾರ್ಥಿನಿ ಹೇಳಿದ್ದಾಳೆ. ಇದನ್ನು ತಡೆದ ಮಹಿಳಾ ಪೊಲೀಸನ್ನು ವಿದ್ಯಾರ್ಥಿನಿ ಕಚ್ಚಿ ಗಾಯಗೊಳಿಸಿದ್ದಾಳೆ. ಎಂಜೆ. ಸರಕಾರಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿ ದೀಪಾ. ಪಿ. ಮೋಹನ್ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಧ್ಯಾಹ್ನ ಈ ನಾಟಕೀಯ ಘಟನೆ ನಡೆದಿದೆ. ಪೊಲೀಸರು ಹೊಡೆದಿದ್ದಾರೆಂದು ಆರೋಪಿಸಿದ ದೀಪಾಳನ್ನು ಅನಾರೋಗ್ಯಕಾರಣ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶ್ವವಿದ್ಯಾನಿಲಯದ ದಲಿತ ದೌರ್ಜನ್ಯ ಮತ್ತು ಅಧ್ಯಾಪಕರು ಲ್ಯಾಬ್‌ಗೆ ಹೋಗಗೊಡದೆ ಅಪಮಾನಿಸಿದ್ದಾರೆಂದು ಆರೋಪಿಸಿ ಉಚ್ಚ ನ್ಯಾಯಾಲಯಕ್ಕೆ ದೀಪಾ ದೂರು ನೀಡಿದ್ದಳು. ಆದರೆ ಕೋರ್ಟು ದೂರನ್ನು ಸ್ವೀಕರಿಸಿಲ್ಲ. ನಂತರ ಸೋಮವಾರ ಜಿಲ್ಲಾ ಪೊಲೀಸ್ ಅಧಿಕಾರಿಯನ್ನುಭೇಟಿಯಾಗಲು ಹೋಗುತ್ತಿದ್ದೇನೆ ಎಂದು ದೀಪಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದಳು. ನಂತರ ಅವರು ಭೇಟಿಗೆ ನಿರಾಕರಿಸುತ್ತಿದ್ದಾರೆಂದು ದೀಪಾ ಫೇಸ್‌ಬುಕ್ ಲೈವ್‌ಮೂಲಕ ತಿಳಿಸಿದ್ದಾಳೆ. ಪ್ಲೇಕಾರ್ಡ್ ಹಿಡಿದು ಫೇಸ್‌ಬುಕ್ ಲೈವ್‌ಮಾಡುತ್ತಿದ್ದ ದೀಪಾಳನ್ನು ಪೊಲೀಸರು ತಡೆದಿದ್ದಾರೆ. ದೀಪಾಳನ್ನು ದೂರ ಸರಿಸಲು ನೋಡಿದ ಮಹಿಳಾ ಪೊಲೀಸ್ ಪ್ರಿಯಾಂಕಾರಕೈಗೆ ಅವಳು ಬಲವಾಗಿ ಕಚ್ಚಿದ್ದಾಳೆ. ಆ ನಂತರ ಪೊಲೀಸರು ದೀಪಾಳನ್ನು ಪೊಲೀಸರು ಬಂಧಿಸಿದರು.
ದೀಪಾಳ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದುದಕ್ಕಾಗಿ ಕೇಸು ಹಾಕಲಾಗಿದೆ. ಮಹಿಳಾ ಪೊಲೀಸ್ ಪ್ರಿಯಾಂಕಾರನ್ನು ಕೋಟ್ಟಯಂ ಜನರಲ್ ಆಸ್ಪತ್ರೆಗೆ ಕರೆತಂದಾಗ ಹೆಚ್ಚಿನ ಪರೀಕ್ಷೆಗೆ ಮೆಡಿಕಲ್ ಕಾಲೇಜಿಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದರು. ಜಿಲ್ಲಾ ಪೊಲೀಸಧಿಕಾರಿ ಎನ್. ರಾಮಚಂದ್ರನ್ ಇದಕ್ಕೆ ಮೊದಲು ದೀಪಾ ತನ್ನನ್ನು ಎರಡು ಬಾರಿ ಭೇಟಿಯಾಗಿದ್ದಾರೆ.ದೀಪಾರ ದೂರನ್ನು ಹೈಕೋರ್ಟ್ ನಿರಾಕರಿಸಿದ್ದರಿಂದ ಸುಪ್ರೀಂಕೋರ್ಟಿಗೆ ದೂರು ಸಲ್ಲಸುವುದು ಮಾತ್ರ ದಾರಿಇರುವುದು ಎರಡೂ ಬಾರಿ ಕೂಡಾ ಹೇಳಿದ್ದೇನೆ.ತನ್ನ ಭೇಟಿಗೆ ಪ್ಲೇಕಾರ್ಡ್ ಹಿಡಿದು ಬಂದಿದ್ದು ಒಂದು ಸಂಚಾಗಿದೆ ಎಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.