×
Ad

ಮಣಿಪುರ ಜನತೆ ಪ್ರಬುದ್ಧರಾಗೇಕು, ಕೇರಳ ನನ್ನನ್ನು ಬೆಂಬಲಿಸಿದೆ: ಇರೋಂ ಶರ್ಮಿಳಾ

Update: 2017-03-14 15:13 IST

ಕೋಯಮತ್ತುರ್,ಮಾ. 14: ಮಣಿಪುರದ ಜನರು ಇನ್ನೂ ಪ್ರಬುದ್ಧರಾಗಿಲ್ಲ. ಅವರು ಪ್ರಬುದ್ಧರಾಗಬೇಕಿದೆ. ಅಲ್ಲಿ ಬಿಜೆಪಿ ಹಣದ ಹರಿವು, ರಟ್ಟೆಬಲದಿಂದ ಗೆದ್ದಿದೆ ಎಂದು ಮಾನವಹಕ್ಕುಗಳ ಕಾರ್ಯಕರ್ತೆ ಇರೊಂ ಶರ್ಮಿಳಾ ಹೇಳಿದ್ದಾರೆ.

ಕೇರಳದ ಜನರು ಎಲ್ಲಕಾಲದಲ್ಲಿಯೂ ನನ್ನನ್ನು ಬೆಂಬಲಿಸಿದ್ದಾರೆ. ಕೇರಳದ ಆತಿಥ್ಯ ಸ್ವೀಕರಿಸಲು ಅತಿಯಾದ ಬಯಕೆ ಇದೆ. ಎಲ್ಲದ್ದರಿಂದ ದೂರನಿಲ್ಲಲಿಕ್ಕಾಗಿ ತಾನು ಕೇರಳಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು.

 ವಿಧಾನಸಭಾ ಚುನಾವಣೆಯ ದಯನೀಯ ಸೋಲಿನ ಬಳಿಕ ಒಂದು ತಿಂಗಳ ಪರಿಪೂರ್ಣ ವಿಶ್ರಾಂತಿಗಾಗಿ ಇರೊಂ ಶರ್ಮಿಳಾ ಅಟ್ಟಪ್ಪಾಡಿಯ ಶಾಂತಿಗ್ರಾಮಕ್ಕೆ ಬಂದಿದ್ದಾರೆ.ಅವರು ಸಾಮಾಜಿಕ ಕಾರ್ಯಕರ್ತೆ ಉಮಾಪ್ರೇಮನ್‌ರ ಅಟ್ಟಪ್ಪಾಡಿ ಶಾಂತಿ ಗ್ರಾಮದಲ್ಲಿ ಉಳಿದುಕೊಳ್ಳಲಿದ್ದಾರೆ.

ಕೆಲವು ಗೆಳೆಯರ ಆಹ್ವಾನದಂತೆ ಅವರು ಕೇರಳ ಸಂದರ್ಶಿಸುತ್ತಿದ್ದಾರೆ. ಇರೋಂ ಶರ್ಮಿಳಾ ಮಣಿಪುರದಿಂದ ಹೊರಗೆಹೋಗುವುದು ಭಾರೀ ಕಡಿಮೆ. ಆದ್ದರಿಂದ ಅವರು ಕೇರಳಕ್ಕೆ ಬಂದಿರುವುದು ದೊಡ್ಡ ಸುದ್ದಿಯಾಗಿದೆ. ಹದಿನಾರುವರ್ಷ ಸುದೀರ್ಘ ಸಮಯದ ಅನ್ನಸತ್ಯಾಗ್ರಹ ಕೊನೆಗೊಳಿಸಿ ಶರ್ಮಿಳಾ(44) ರಾಜಕೀಯಕ್ಕೆ ಪ್ರವೇಶಿಸಿದ್ದರು. ಆದರೆ ಚುನಾವಣೆಯಲ್ಲಿ ಅವರು ದಯನೀಯವಾಗಿ ಸೋತಿದ್ದಾರೆ. ಶರ್ಮಿಳಾ ಮುಖ್ಯಮಂತ್ರಿ ಇಬೋಬಿಸಿಂಗ್ ವಿರುದ್ಧ ಸ್ಪರ್ಧಿಸಿ 90 ಮತಗಳನ್ನು ಮಾತ್ರಪಡೆದಿದ್ದರು ಎಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News