ಸಹೋದರಿ ನಿಧನ; ಕೃಷ್ಣ ಬಿಜೆಪಿ ಸೇರ್ಪಡೆ ಮುಂದೂಡಿಕೆ
Update: 2017-03-15 09:35 IST
ಹೊಸದಿಲ್ಲಿ, ಮಾ.15: ಸಹೋದರಿ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಎಂ ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾಗುವುದನ್ನು ಮುಂದೂಡಿದ್ದಾರೆ.
ಮಂಗಳವಾರದಂದು ಮಂಡ್ಯದ ಸೋಮನಹಳ್ಳಿಯಲ್ಲಿ ಕೃಷ್ಣ ಅವರ ಸಹೋದರಿ ಸುನೀತಾ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಕೃಷ್ಣ ಬುಧವಾರ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ದಿನ ನಿಗದಿಯಾಗಿತ್ತು.
ಬಿಜೆಪಿ ನಾಯಕರನ್ನು ಭೇಟಿಯಾಗಿ ಬಿಜೆಪಿ ಸೆರ್ಪಡೆಯಾಗುವ ಉದ್ದೇಶಕ್ಕಾಗಿ ಮಂಗಳವಾರ ಎಸ್.ಎಂ.ಕೃಷ್ಣ ತನ್ನ ಕುಟುಂಬದೊಂದಿಗೆ ಹೊಸದಿಲ್ಲಿಗೆ ತೆರಳಿದ್ದರು. ಆದರೆ ಅವರು ದಿಲ್ಲಿ ತಲುಪುವಾಗಲೇ ಅವರ ಸೋದರಿ ನಿಧನರಾದ ದುಃಖದ ವಾರ್ತೆ ಲಭಿಸಿದೆ. ಈ ಕಾರಣದಿಂದಾಗಿ ಕೃಷ್ಣ ತನ್ನ ಕಾರ್ಯಕ್ರಮವನ್ನು ಬದಿಗೊತ್ತಿ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.