ಹೆಲ್ಮೆಟ್ ಧರಿಸದ್ದಕ್ಕೆ ಹೊಡೆಯಬೇಕೇ?

Update: 2017-03-15 07:57 GMT

ಮಾನಂದವಾಡಿ, ಮಾ. 15: ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಯುವಕನನ್ನು ಬೆನ್ನಟ್ಟಿ ಮನೆಗೆ ನುಗ್ಗಿ ಹಿಡಿದ ಪೊಲೀಸರುಠಾಣೆಗೆ ಕರೆತಂದು ಭಯಾನಕವಾಗಿ ಬೆಂಡೆತ್ತಿದ ಘಟನೆ ಪುಲ್‌ಪಳ್ಳಿಯಲ್ಲಿ ನಡೆದಿದೆ.

ಕಳೆದ ರವಿವಾರ ಪುಲ್‌ಪಳ್ಳಿಯ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ ಸವಾರ ರೋಯಿ ಥಾಮಸ್(46) ಪೊಲೀಸರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಮಾನಂದವಾಡಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಥಾಮಸ್ ಪತ್ನಿಯ ಮನೆಗೆ ಬೈಕ್‌ನಲ್ಲಿ ಹೊರಟಿದ್ದರು. ಹೆಲ್ಮೆಟ್ ಧರಿಸದ್ದನ್ನು ನೋಡಿ ಪೊಲೀಸರು ಕೈತೋರಿಸಿದ್ದರು. ಆದರೆ ಥಾಮಸ್‌ಗೆ ಪೊಲೀಸರು ಅದು ಕಾಣಿಸಿರಲಿಲ್ಲ. ಬೈಕ್ ನಿಲ್ಲಿಸದೆ ಹೋದ ಥಾಮಸ್‌ರನ್ನು ಪತ್ನಿಯ ಮನೆಯಿಂದ ಎಳೆದು ತಂದು ಪೊಲೀಸರು ಠಾಣೆಯಲ್ಲಿ ಸರಿಯಾಗಿ ಭಾರಿಸಿದ್ದಾರೆ. ಎಡಕಾಲು, ಕೈಗಳಿಗೆ ಲಾಠಿಯೇಟಿನಿಂದ ಗಂಭೀರ ಗಾಯಗಳಾಗಿವೆ.

ಸೋಮವಾರ ಥಾಮಸ್‌ರನ್ನು ಬತ್ತೇರಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಿದಾಗ ಅವರ ದೈಹಿಕ ಸ್ಥಿತಿಯಲ್ಲಿ ಅನುಮಾನ ಗೊಂಡ ಮ್ಯಾಜಿಸ್ಟ್ರೇಟ್ ಆಕುರಿತು  ಪ್ರಶ್ನಿಸಿದ್ದಾರೆ. ಆಗ ಥಾಮಸ್ ತನಗಾದ ದೌರ್ಜನ್ಯವನ್ನು ಮ್ಯಾಜಿಸ್ಟ್ರೇಟ್‌ರಿಗೆ ತಿಳಿಸಿದ್ದಾರೆ. ಕೂಡಲೇ ಜಾಮೀನು ನೀಡಿ ಆಸ್ಪತ್ರೆಗೆ ಸೇರಿಸಲು ಮ್ಯಾಜಿಸ್ಟ್ರೇಟ್ ಆದೇಶಿಸಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News