ಕಮಲ್ ಹಾಸನ್ ವಿರುದ್ಧ ಹಿಂದೂ ಮಕ್ಕಳ್ ಕಚ್ಚಿಯಿಂದ ದೂರು
Update: 2017-03-16 10:38 IST
ಚೆನ್ನೈ, ಮಾ.16: ತಮಿಳುನಾಡಿನ ನಟ ಸೂಪರ್ ಸ್ಟಾರ್ ಕಮಲ ಹಾಸನ್ ಹಿಂದೂಗಳ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲಾ ತಾಣಗಳಲ್ಲಿ ಅಗೌರವದ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಹಿಂದೂ ಮಕ್ಕಳ್ ಕಚ್ಚಿ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ನಗರ ಪೊಲೀಸರಿಗೆ ದೂರು ನೀಡಿರುವ ಹಿಂದೂ ಮಕ್ಕಳ್ ಕಚ್ಚಿ ಸದಸ್ಯರು ಕಮಲ್ ಹಾಸನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಹಾಭಾರತದಲ್ಲಿ ಹೆಣ್ಣನ್ನು ಒತ್ತೆಯಿಟ್ಟು ಪಗಡೆಯಾಡಲಾಗಿತ್ತು ಎಂದು ಟಿವಿ ಸಂದರ್ಶನಲ್ಲಿ ಕಮಲ ಹಾಸನ್ ಆರೋಪಿಸಿದ್ದರು. ಕಮಲಹಾಸನ್ ಹೇಳಿಕೆಯು ಎರಡು ಗುಂಪುಗಳ ನಡುವೆ ವೈರತ್ವವನ್ನು ಮತ್ತು ಸಾರ್ವಜನಕ ಸ್ವಾಸ್ಥ್ಯವನ್ನು ಕೆಡಿಸುವಂತಾದ್ದಾಗಿದೆ ಎಂದು ಮಕ್ಕಳ್ ಕಚ್ಚಿ ಆರೋಪಿಸಿದೆ.