ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಜಯಲಲಿತಾ ‘ಪುತ್ರ’ !

Update: 2017-03-16 06:08 GMT

ಚೆನ್ನೈ,ಮಾ.16 : ತಮಿಳುನಾಡು ರಾಜಕೀಯದಲ್ಲಿನ ಗೊಂದಲಕ್ಕೆ ಮತ್ತೊಂದು ಸೇರ್ಪಡೆಯೆಂಬಂತೆ ಇದೀಗ ಇದ್ದಕ್ಕಿದ್ದಂತೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ‘ರಹಸ್ಯ ಪುತ್ರ’ನೊಬ್ಬ ಪ್ರತ್ಯಕ್ಷನಾಗಿದ್ದಾರೆ. ತನ್ನ ‘ತಾಯಿ’ಯನ್ನು ಆಕೆಯ ಸಮೀಪವರ್ತಿ ವಿ ಕೆ ಶಶಿಕಲಾ ಮೆಟ್ಟಿಲುಗಳಿಂದ ಕೆಳಕ್ಕೆ ದೂಡಿದ್ದಾಗಿ ಆತ ಹೇಳಿಕೊಂಡಿದ್ದಾರೆ. ತನ್ನ ನಿಜ ಗುರುತನ್ನು ಹೊರ ಜಗತ್ತಿಗೆ ತಿಳಿಸುವ ವಿಚಾರದಲ್ಲಿ ಅವರಿಬ್ಬರ ನಡುವೆ ವಾದ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದೂ ಆತ ಹೇಳಿಕೊಂಡಿದ್ದಾರೆ.

ಈರೋಡ್ ನಿವಾಸಿಯೆಂದು ಹೇಳಿಕೊಳ್ಳುತ್ತಿರುವ ಕೃಷ್ಣಮೂರ್ತಿ ಎಂಬ ವ್ಯಕ್ತಿ ತಮಿಳುನಾಡು ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರೊಂದನ್ನು ಸಲ್ಲಿಸಿ ತಾನು ಜಯಲಲಿತಾ ಆಸ್ತಿಗೆ ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಜಯಲಲಿತಾ ಅವರು ಸಾವಿಗೀಡಾಗುವುದಕ್ಕಿಂತ ಎರಡು ತಿಂಗಳು ಮೊದಲು ತಾನು ಆಕೆಯ ಪೋಯೆಸ್ ಗಾರ್ಡನ್ ನಿವಾಸದಲ್ಲಿ 206ರಲ್ಲಿ ನಾಲ್ಕು ದಿನ ವಾಸವಾಗಿದ್ದೆ ಎಂದೂ ಆತ ವಾದಿಸಿದ್ದಾರೆ.

‘‘ನಾನು ಆಕೆಯ ಪುತ್ರನೆಂದು ನನ್ನ ತಾಯಿ ಜಗತ್ತಿಗೆ ತಿಳಿಯಪಡಿಸಬಯಸಿದ್ದರು. ಇದೇ ವಿಚಾರವಾಗಿ ಅವರ ಹಾಗೂ ಶಶಿಕಲಾ ನಡುವೆ ಜಗಳವೇರ್ಪಟ್ಟಿತ್ತು’’ ಎಂಬುದು ಕೃಷ್ಣಮೂರ್ತಿ ವಾದವಾಗಿದೆ.

ಕೃಷ್ಣಮೂರ್ತಿ ಪ್ರಸಕ್ತ ಜಯಲಲಿತಾ ಆಪ್ತೆ ವನಿತಾಮಣಿ ನಿವಾಸದಲ್ಲಿ ತಮ್ಮ ದತ್ತು ಹೆತ್ತವರೊಂದಿಗೆ ವಾಸವಾಗಿದ್ದಾರೆ.

ಅವರಂತೆಯೇ ಮಾಜಿ ಸ್ಪೀಕರ್ ಪಿ ಎಚ್ ಪಾಂಡ್ಯನ್ ಕೂಡ ಜಯಲಲಿತಾ ಅವರನ್ನು ಮೆಟ್ಟಲುಗಳಿಂದ ದೂಡಲಾಗಿತ್ತು ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದರು. ಮಾಜಿ ಮುಖ್ಯಮಂತ್ರಿ ಒ ಎಚ್ ಪನ್ನೀರ್ ಸೆಲ್ವಂ ಕೂಡ ಜಯಲಲಿತಾ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News