×
Ad

ಶೀತಾಗಾರ ಸ್ಫೋಟ ಪ್ರಕರಣ: ರಕ್ಷಣಾ ಕಾರ್ಯಾಚರಣೆ ಅಂತ್ಯ

Update: 2017-03-17 18:38 IST

ಕಾನ್ಪುರ, ಮಾ.17: ಶಿವರಾಜಪುರ ಎಂಬಲ್ಲಿ ಶೀತಾಗಾರದಲ್ಲಿ ಸ್ಫೋಟ ಸಂಭವಿಸಿ ಐವರು ಮೃತಪಟ್ಟ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಶಿವರಾಜಪುರದಲ್ಲಿರುವ ಕಟಿಯಾರ್ ಶೀತಾಗಾರದ ಗ್ಯಾಸ್ ಕೊಠಡಿಯಲ್ಲಿ ಅಮೋನಿಯಾ ಸೋರಿಕೆಯಾದ ಕಾರಣ ಸ್ಫೋಟ ಸಂಭವಿಸಿದ್ದು ಕಟ್ಟಡದ ಅರ್ಧಭಾಗ ನೆಲಸಮಗೊಂಡಿತ್ತು. ಪ್ರಕರಣದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದು ಎಂಟು ಮಂದಿ ಗಂಭೀರ ಗಾಯಗೊಂಡಿದ್ದರು. ಕಟ್ಟಡದ ಭಗ್ನಾವಶೇಷದ ಅಡಿ ಇನ್ನಷ್ಟು ಮೃತದೇಹಗಳು ಇರುವ ಬಗ್ಗೆ ಶಂಕಿಸಲಾಗಿತ್ತು. ಅದರಂತೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಈ ಸಂದರ್ಭ ಯಾವುದೇ ಮೃತದೇಹ ಅಥವಾ ಗಾಯಾ ು ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News