ಡಬ್ಬಿಂಗ್‌ಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್
ಭಾಷೆಯನ್ನು ರಕ್ಷಿಸುವ ಹೆಸರಿನಲ್ಲಿ ಡಬ್ ಮಾಡಲಾದ ಚಲನಚಿತ್ರ ಅಥವಾ ಟಿವಿ ಧಾರಾವಾಹಿಗಳ ಪ್ರದರ್ಶನವನ್ನು ತಡೆಯಲು ಯತ್ನಿಸುವ ಯಾವುದೇ ವ್ಯಕ್ತಿಯನ್ನು 2002ರ ಸ್ಪರ್ಧಾ ಕಾಯ್ದೆಯ ಉಲ್ಲಂಘನೆಗಾಗಿ ತಪ್ಪಿತಸ್ಥನೆಂದು ಪರಿಗಣಿಸಲಾಗುವುದೆಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಹೊಸದಿಲ್ಲಿ,ಮಾ.17: ಭಾಷಾ ಪಾರಮ್ಯವಾದವು ಉಲ್ಪಣಿಸುತ್ತಿರುವ ಈ ಸಮಯದಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದ್ದು, ಭಾಷೆಯನ್ನ್ನುು ರಕ್ಷಿಸುವ ಹೆಸರಿನಲ್ಲಿ ಡಬ್ ಮಾಡಲ್ಪಟ್ಟ ಚಲನಚಿತ್ರಗಳನ್ನು ಅಥವಾ ಟಿವಿ ಧಾರಾವಾಹಿಗಳ ಪ್ರದರ್ಶನವನ್ನು ತಡೆಯಲು ಯತ್ನಿಸುವರನ್ನು 2002ರ ಸ್ಪರ್ಧಾ ಕಾಯ್ದೆಯ ಉಲ್ಲಂಘನೆಗಾಗಿ ತಪ್ಪಿತಸ್ಥರೆಂಬುದಾಗಿ ಪರಿಗಣಿಸಲಾಗುವುದೆಂದು ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಪ್ರದರ್ಶನದ ವಿರುದ್ಧ ನಡೆಯುತ್ತಿರುವ ಚಳವಳಿಯ ಮೇಲೂ ಸುಪ್ರೀಂಕೋರ್ಟ್‌ನ ಈ ಆದೇಶವು, ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
ಹಿಂದಿಯಿಂದ ಬಂಗಾಳಿಗೆ ಡಬ್ ಮಾಡಲಾದ ಮಹಾಭಾರತ ಟಿವಿ ಧಾರಾವಾಹಿಯನ್ನು , ಪ.ಬಂಗಾಳದ ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದನ್ನು ಪ.ಬಂಗಾಳದ ಕಲಾವಿದರು ಹಾಗೂ ತಂತ್ರಜ್ಞರ ಸಂಘ ಹಾಗೂ ಈಶಾನ್ಯಭಾರತ ಚಲನಚಿತ್ರ ಸಂಘ (ಇಐಎಂಪಿಎ) ಬಲವಾಗಿ ವಿರೋಧಿಸಿದ್ದವು.
ಇತರ ಭಾಷೆಗಳಿಂದ ಬಂಗಾಳಿಗೆ ಟಿವಿಧಾರಾವಾಹಿಗಳನ್ನು ಹಾಗೂ ಚಲನಚಿತ್ರಗಳನ್ನು ಡಬ್ ಮಾಡುವುದರಿಂದ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆಯೆಂದು ಅವುಗಳ ವಾದವಾಗಿತ್ತು. ಡಬ್ಬಿಂಗ್ ಹಾವಳಿಯಿಂದ ಬಂಗಾಳಿಯಲ್ಲಿ ಧಾರಾವಾಹಿಗಳ ನಿರ್ಮಾಣಕ್ಕೆ ಹಿನ್ನಡೆಯುಂಟಾಗಲಿದೆಯೆಂದು ಅವು ಆತಂಕ ವ್ಯಕ್ತಪಡಿಸಿದ್ದವು.
ಬಂಗಾಳಿ ಭಾಷೆಗೆ ಡಬ್ ಮಾಡಲಾದ ಟಿವಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು ಬಹಿಷ್ಕರಿಸುವುದಾಗಿ ಇಐಎಂಪಿಎ ಹಾಗೂ ಸಮನ್ವಯ ಸಮಿತಿಯು ಬೆದರಿಕೆ ಹಾಕಿತ್ತು. ಆದರೆ ಟಿವಿ ವಾಹಿನಿಯೊಂದರ ಮಾಲಕರು ಈ ಬಗ್ಗ್ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ಕ್ಕೆ ದೂರು ನೀಡಿದಾಗ, ಅದು ಈ ಬೆದರಿಕೆಯು ಸ್ಪರ್ಧಾ ವಿರೋಧಿಯೆಂದು ಅಭಿಪ್ರಾಯಿಸಿತ್ತು. ಆದಾಗ್ಯೂ ಆನಂತರ ಸ್ಪರ್ಧಾ ಮೇಲ್ಮನವಿ ನ್ಯಾಯಾಧೀಕರಣವು ಡಬ್ಬಿಂಗ್ ವಿರೋಧದಿಂದ ಸ್ಪರ್ಧಾತ್ಮಕತೆಗೆ ಹಾನಿಯಿಲ್ಲವೆಂದು ವಾದಿಸಿತ್ತು. ಆನಂತರ ನ್ಯಾಯಾಧೀಕರಣದ ನಿರ್ಧಾರವನ್ನು ಪ್ರಶ್ನಿಸಿಸಿ ಸಿಸಿಐ ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು.
ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಿರುವ ಟಿವಿ ವಾಹಿನಿಗಳ್ನು ಬಹಿಷ್ಕರಿಸುವ ಬೆದರಿಕೆಯು, ಅವು ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಕ್ಕೆ ತಡೆಯೊಡ್ಡುವ ಉದ್ದೇಶದಿಂದ ಕೂಡಿರುವುದಾಗಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎ.ಎಂ. ಸಪ್ರೆ ಅವರಿದ್ದ ನ್ಯಾಯಪೀಠ ತಿಳಿಸಿದೆ.