ರಾಜಕೀಯ ಒಲ್ಲೆ ಎಂದ ಆಮಿರ್

Update: 2017-03-17 15:31 GMT

ಬಾಲಿವುಡ್‌ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮಿರ್ ಖಾನ್, 52ನೆ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸಾಮಾಜಿಕ ಕಳಕಳಿಯಿರುವ ನಟನಾದ ಆಮಿರ್, ಹಲವಾರು ಟಿವಿ ಶೋಗಳಲ್ಲಿ, ಸಂದರ್ಶನಗಳಲ್ಲಿ ವಿವಿಧ ಸಾಮಾಜಿಕ- ರಾಜಕೀಯ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಅವರು ನಿರ್ಭೀತಿಯಿಂದ ವ್ಯಕ್ತಪಡಿಸಿದ್ದಾರೆ.

ಇದು ಅವರನ್ನು ಸಮಸ್ಯೆಗಳಿಗೆ ಈಡು ಮಾಡಿದ್ದೂ ಇದೆ. ಸತ್ಯಮೇವಜಯತೆ ಟಿವಿ ಕಾರ್ಯಕ್ರಮದ ಮೂಲಕ ಆಮಿರ್, ಹೆಣ್ಣುಭ್ರೂಣ ಹತ್ಯೆ, ರೈತರ ಆತ್ಮಹತ್ಯೆ ಹಾಗೂ ಮಾರ್ಯಾದಾ ಹತ್ಯೆ ಮತ್ತಿತರ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದರು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈ ಪ್ರಬುದ್ಧ ನಟನಿಗೆ ರಾಜಕೀಯ ಪ್ರವೇಶಿಸುವ ಇರಾದೆ ಇಲ್ಲವಂತೆ.

ಆಮಿರ್ 52ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಪತ್ರಕರ್ತರು ಅವರನ್ನು ರಾಜಕೀಯಕ್ಕಿಳಿಯುವ ಯೋಚನೆಯಿದೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಆಮಿರ್ ಅದನ್ನು ಖಡಾಖಂಡಿತವಾಗಿ ನಿರಾಕರಿಸಿದರು. ರಾಜಕೀಯವೆಂಬುದು ನನ್ನಂತವರಿಗಲ್ಲ. ಸಿನೆಮಾ ಕಲಾವಿದನಾಗಿ ಹಾಗೂ ಸೃಜನಶೀಲ ವ್ಯಕ್ತಿಯಾಗಿ ನಾನು ಈ ದೇಶಕ್ಕೆ, ಸಮಾಜಕ್ಕೆ ನೀಡಬೇಕಾದ ಕೊಡುಗೆ ಸಾಕಷ್ಟಿದೆ. ನಾನದನ್ನು ಸಿನೆಮಾದ ಮೂಲಕವೇ ನೀಡಲು ಇಚ್ಛಿಸುತ್ತೇನೆ. ನಾನು ಬದಲಾಗಲು ಇಚ್ಛಿಸುವುದಿಲ್ಲ’’ ಎಂದು ಆಮಿರ್ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ.

ದಂಗಲ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಆಮಿರ್, ಸೀಕ್ರೆಟ್ ಸೂಪರ್‌ಸ್ಟಾರ್ ಹಾಗೂ ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಲ್ಯೂಟ್ ಎಂಬ ಹೆಸರಿನ ಚಿತ್ರದಲ್ಲಿ ಅವರು ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಏನಿದ್ದರೂ ಈ ಎರಡು ಚಿತ್ರಗಳು ಮುಂದಿನ ವರ್ಷವೇ ಬಿಡುಗಡೆಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News