ಬಿಡುಗಡೆಗೆ ಮೊದಲೇ 100 ಕೋಟಿ ರೂ. ಕ್ಲಬ್ ಪ್ರವೇಶಿಸಿದ ಎಂದಿರನ್ 2.0

Update: 2017-03-17 15:36 GMT

ಡೆರೆಕ್ಟರ್ ಶಂಕರ್- ಸೂಪರ್‌ಸ್ಟಾರ್ ರಜನಿಕಾಂತ್ ಕಾಂಬಿನೇಶನ್‌ನೊಂದಿಗೆ ನಿರ್ಮಾಣಗೊಂಡಿರುವ,ಬಿಗ್‌ಬಜೆಟ್ ಚಿತ್ರ ‘ಎಂದಿರನ್ 2’, ಬಿಡುಗಡೆ ಮೊದಲೇ 100 ಕೋಟಿ ಕ್ಲಬ್‌ಗೆ ಸೇರ್ಪಡೆಗೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಬರೋಬ್ಬರಿ 350 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕುಗಳು 110 ಕೋಟಿ ರೂ.ಗೆ ಮಾರಾಟವಾಗಿವೆ. ಈ ಚಿತ್ರವನ್ನು ನಿರ್ಮಿಸಿರುವ ಲೈಕ್ ಪ್ರೊಡಕ್ಷನ್ಸ್‌ನ ಮುಖ್ಯಸ್ಥ ರಾಜು ಮಹಾಲಿಂಗ ಈ ಚಿತ್ರದ ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳ ಉಪಗ್ರಹ ಪ್ರಸಾರದ ಹಕ್ಕಗಳನ್ನು ಝೀ ಟಿವಿ ವಾಹಿನಿಗೆ 110 ಕೋಟಿ ರೂ.ಗೆ ಮಾರಿದ್ದಾರೆ.

ಭಾರತದಲ್ಲಿ ಚಿತ್ರವೊಂದರ ಉಪಗ್ರಹ ಪ್ರಸಾರ ಹಕ್ಕುಗಳು ಇಷ್ಟೊಂದು ಬೆಲೆಗೆ ಮಾರಾಟವಾಗಿರುವುದು, ಒಂದು ದಾಖಲೆಯೇ ಆಗಿದೆ. ಅಂದಹಾಗೆ ಝೀ ಟಿವಿಗೆ ಹದಿನೈದು ವರ್ಷಗಳ ಅವಧಿಗೆ ‘ಎಂದಿರನ್ 2’ ಚಿತ್ರದ ಪ್ರಸಾರದ ಹಕ್ಕುಗಳನ್ನು ನೀಡಲಾಗಿದೆ. ಈ ಮಧ್ಯೆ ಭಾರೀ ನಿರೀಕ್ಷೆ ಹುಟ್ಟಿಸಿರುವ ಇನ್ನೊಂದು ಚಿತ್ರವಾದ ‘ಬಾಹುಬಲಿ 2’ ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕುಗಳನ್ನು ಸೋನಿಎಂಟರ್‌ಟೈನ್‌ಮೆಂಟ್ 51 ಕೋಟಿ ರೂ.ಗೆ ಖರೀದಿಸಿದೆ.

ರಜನಿಕಾಂತ್ ನಾಯಕನಾಗಿರುವ ಈ ಚಿತ್ರದ ಬಾಲಿವುಡ್‌ನ ಸೂಪರ್‌ಹೀರೋ ಆಕ್ಷಯ್ ಕುಮಾರ್ ಖಳನಾಯಕ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಟಿ ಹಾಗೂ ರೂಪದರ್ಶಿ ಆ್ಯಮಿ ಜಾಕ್ಸನ್ ನಾಯಕಿ. ತ್ರಿಡಿ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಹಾಲಿವುಡ್‌ನ ಕೆಲವು ಪ್ರಸಿದ್ಧ ತಂತ್ರಜ್ಞರು ಕೂಡಾ ಕೆಲಸ ಮಾಡಿದ್ದಾರೆ.

vಜುರಾಸಿಕ್ ಪಾರ್ಕ್, ಐರನ್‌ಮ್ಯಾನ್, ಆ್ಯವೆಂಜರ್ಸ್ ಮತ್ತಿತರ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಅಮೆರಿಕದ ಖ್ಯಾತ ಗ್ರಾಫಿಕ್ಸ್ ಕಂಪೆನಿಯಾದ ‘ಲೆಗನಿ ಇಪೆಕ್ಸ್ ’, ಎಂದಿರನ್‌ನಲ್ಲಿ ಗ್ರಾಫಿಕ್ಸ್ ಕಸರತ್ತುಗಳನ್ನು ಪ್ರದರ್ಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News