ಕ್ಯಾಂಪಸ್‌ಗಳು ಅಸಹಿಷ್ಣುತೆ ಮುಕ್ತವಾಗಲಿ: ರಾಷ್ಟ್ರಪತಿ

Update: 2017-03-18 03:34 GMT

ಮುಂಬೈ, ಮಾ.18: ದೇಶದ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿವಿ ಕ್ಯಾಂಪಸ್‌ಗಳು ಮುಕ್ತ ಸಂವಾದಕ್ಕೆ ವೇದಿಕೆಯಾಗಬೇಕೇ ವಿನಃ ಅಸಹಿಷ್ಣುತೆ, ಪಕ್ಷಪಾತ ಹಾಗೂ ದ್ವೇಷಕ್ಕೆ ಅವಕಾಶ ಇರಬಾರದು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವೇದಿಕೆಯಾಗಬೇಕು. ಇದಲ್ಲಿ ದ್ವೇಷ, ಪೂರ್ವಾಗ್ರಹ, ಅಸಹಿಷ್ಣುತೆಗೆ ಅವಕಾಶ ಇರಬಾರದು" ಎಂದು ಮುಂಬೈ ವಿವಿ ಆಯೋಜಿಸಿದ್ದ ಕೃಷಿವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಸನ್ಮಾನ ಸಮಾರಂಭದಲ್ಲಿ ಅವರು ನುಡಿದರು.

"ವಿಶ್ವವಿದ್ಯಾನಿಲಯಗಳು ಬಹುಮುಖಿ ಅಭಿಪ್ರಾಯಗಳ, ಚಿಂತನೆಗಳ ಹಾಗೂ ತತ್ವ ಸಿದ್ಧಾಂತಗಳ ಸಹಬಾಳ್ವೆಯ ತಾಣಗಳಾಗಬೇಕು" ಎಂದು ರಾಷ್ಟ್ರಪತಿ ಆಶಿಸಿದರು. ದೇಶಾದ್ಯಂತ ಹಲವು ಕ್ಯಾಂಪಸ್‌ಗಳಲ್ಲಿ ಕಳೆದ ಕೆಲ ವರ್ಷಗಳಿಂದ ಸಂಘರ್ಷ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಈ ಅಭಿಪ್ರಾಯ ವಿಶೇಷ ಮಹತ್ವ ಪಡೆದಿದೆ.

ಹಸಿರುಕ್ರಾಂತಿಯ ಪಿತಾಮಹ ಎನಿಸಿದ ಸ್ವಾಮಿನಾಥನ್ ಅವರಿಗೆ ಗೌರವ ಕಾನೂನು ಡಾಕ್ಟರೇಟ್ (ಎಲ್‌ಎಲ್‌ಡಿ) ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News