×
Ad

ನಾಲ್ಕು ಜಿಎಸ್‌ಟಿ ಪೂರಕ ಮಸೂದೆಗಳಿಗೆ ಕೇಂದ್ರ ಸಂಪುಟದ ಹಸಿರು ನಿಶಾನೆ

Update: 2017-03-20 18:35 IST

ಹೊಸದಿಲ್ಲಿ,ಮಾ.20: ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಜಾರಿಗೊಳಿಸಲು ನಾಲ್ಕು ಪೂರಕ ಮಸೂದೆಗಳಿಗೆ ಸಂಪುಟವು ಸೋಮವಾರ ಒಪ್ಪಿಗೆಯನ್ನು ನೀಡಿದೆ. ಈ ವಾರವೇ ಈ ಮಸೂದೆಗಳು ಸಂಸತ್ತಿನಲ್ಲಿ ಮಂಡನೆ ಯಾಗಲಿವೆ. ಸಂಸತ್ತಿನಿಂದ ಈ ಮಸೂದೆಗಳ ಅಂಗೀಕಾರ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಿಂದ ಪ್ರತ್ಯೇಕ ಮಸೂದೆಯೊಂದರ ಅಂಗೀಕಾರ ಜಿಎಸ್‌ಟಿಯನ್ನು ಜಾರಿಗೊಳಿಸಲು ಶಾಸಕಾಂಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿವೆ.

  ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಮಸೂದೆ (ರಾಜ್ಯಗಳಿಗೆ ಪರಿಹಾರ)ಗಳಿಗೆ ಒಪ್ಪಿಗೆಯನ್ನು ನೀಡಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಈ ಮಸೂದೆಗಳನ್ನು ಹಣಕಾಸು ಮಸೂದೆಗಳನ್ನಾಗಿ ಸಂಸತ್ತಿನಲ್ಲಿ ಮಂಡಿಸ ಲಾಗುವುದು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News