ನವಾಝುದ್ದೀನ್ ಸಿದ್ದೀಕಿಕೊ ಗುಸ್ಸಾ ಕ್ಯೂ ಆತಾ ಹೈ ?

Update: 2017-03-20 15:48 GMT

ಮುಂಬೈ, ಮಾ. 20 : ಖ್ಯಾತ ನಟ ನವಾಝುದ್ದೀನ್ ಸಿದ್ದೀಕಿ ಸಿಟ್ಟಾಗಿದ್ದಾರೆ. ಅದೂ ಪ್ರತಿಷ್ಠಿತ ಫಿಲ್ಮ್ ಫೇರ್ ನಿಯತಕಾಲಿಕದ ಮೇಲೆ. ಅದಕ್ಕಾಗಿ ಅವರು ನಿಯತಕಾಲಿಕಕ್ಕೆ ಕಾನೂನು ನೋಟೀಸ್ ಕಳುಹಿಸಿದ್ದಾರೆ. 

ಮಾರ್ಚ್ 8, 2017 ರ ಫಿಲ್ಮ್ ಫೇರ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ನವಾಝುದ್ದೀನ್ ಓರ್ವ ಅಪರಿಚಿತ ಮಹಿಳೆ ಜೊತೆಗಿರುವ ಚಿತ್ರ ಪ್ರಕಟಿಸಿ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಬರೆಯಲಾಗಿತ್ತು. ಇದು ನವಾಝುದ್ದೀನ್ ಸಿಟ್ಟಿಗೆ ಕಾರಣ. ತನ್ನ ಹಾಗು ಪತ್ನಿ ಅಂಜಲಿ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿದೆ ಎಂಬ ವದಂತಿಗಳ ನಡುವೆಯೇ ಈ ಲೇಖನ ಪ್ರಕಟವಾಗಿರುವುದು ಅವರಿಗೆ ತೀವ್ರ ಇರಿಸುಮುರುಸು ಉಂಟು ಮಾಡಿದೆ. 

ಇದರಿಂದ ತನಗೆ " ಅನಗತ್ಯ ಮಾನಸಿಕ ಕಿರುಕುಳ, ಆಘಾತ ಹಾಗು ಅನನುಕೂಲ ಉಂಟಾಗಿದೆ " ಎಂದು ನೋಟೀಸಿನಲ್ಲಿ ಹೇಳಲಾಗಿದೆ  ಹಾಗು ಮುಂದಿನ ಏಳು ದಿನಗಳೊಳಗೆ ನಿಯತಕಾಲಿಕ ಕ್ಷಮೆ ಕೋರಿ ಸ್ಪಷ್ಟೀಕರಣ ಪ್ರಕಟಿಸಬೇಕು ಎಂದು ಹೇಳಲಾಗಿದೆ. 

ಇತ್ತೀಚಿಗೆ ನವಾಝುದ್ದೀನ್ ಗೆ  ಅವರ ಸೋದರ ಏಳು ವರ್ಷದ ಸಂತುಷ್ಟ ದಾಂಪತ್ಯ ಜೀವನ ಪೂರ್ಣಗೊಳಿಸಿದ್ದಕ್ಕಾಗಿ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News