×
Ad

ಎಸ್ಪಿ, ಚಿತ್ರಾರಿಗೆ ನೋಟಿಸು ಕಳುಹಿಸಿದ ಇಳಯರಾಜ ವಿರುದ್ಧ ಸೋದರನ ವಾಗ್ದಾಳಿ

Update: 2017-03-21 14:57 IST

ಚೆನ್ನೈ, ಮಾ. 21: ಅನುಮತಿಯಿಲ್ಲದೆ ತನ್ನ ಹಾಡುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂರಿಗೆ ನೋಟಿಸು ಕಳುಹಿಸಿದ ಇಳಯರಾಜರನ್ನು ಅವರ ಸಹೋದರ ಸಂಗೀತ ನಿರ್ದೇಶಕ ಗಂಗೈ ಅಮರ್ ಕಟುವಾಗಿ ಟೀಕಿಸಿದ್ದಾರೆ. ಈ ಕ್ರಮದಲ್ಲಿ ಇಳಯರಾಜರ ಅಹಂಕಾರ ಮತ್ತು ಹಣದೊಂದಿಗಿನ ವ್ಯಾಮೋಹ ಎದ್ದು ಕಾಣುತ್ತಿದೆ. ಇಳಯ ರಾಜರ ಕ್ರಮ ಅಂಗೀಕರಿಸಲು ಸಾಧ್ಯವಿಲ್ಲ. ಆತ ಇದನ್ನು ಯಾಕೆ ಮಾಡಿದರೆಂದು ಸ್ಪಷ್ಟವಾಗಿಲ್ಲ. ಇನ್ನು ಕೂಡಾ ಹೀಗೆ ಸಂಪಾದಿಸಿ ಗುಡ್ಡೆಹಾಕುವುದರಿಂದ ಪ್ರಯೋಜನವೇನಿದೆ.ಸಂಗೀತವನ್ನು ಕೇವಲ ವ್ಯಾಪಾರವನ್ನಾಗಿ ಮಾಡಬಾರದು. ನಂತರದ ಪೀಳಿಗೆ ರಾಜರ ಹಾಡನ್ನು ಹಾಡಿ ಆನಂದಿಸುವುದನ್ನು ನೋಡಿ ಅಭಿಮಾನಪಡವುದಲ್ಲವೇ ಒಳ್ಳೆಯದು ಎಂದು ಗಂಗೈ ಅಮರನ್ ಕೇಳಿದ್ದಾರೆ.

ಸಂಗೀತ ನಿರ್ದೇಶಕ ರಾಗ ಹಾಕಿದ ಹಾಡುಗಳು ಜನರು ಹಾಡಿ ಆನಂದಿಸಲಿಕ್ಕಿರುವುದು. ಯಾರೂ ಹಾಡಬಾರದೆಂದು ಹಟಹಿಡಿಯುವುದಾದರೆ ಮತ್ತೆ ಯಾಕೆ ಸಂಗೀತ ನಿರ್ದೇಶನ ಮಾಡಬೇಕು. ಎಂಎಸ್ ವಿಶ್ವನಾಥನ್ ರಾಗ ಹಾಕಿದ ತ್ಯಾಗರಾಜಸ್ವಾಮಿ, ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಹಲವರು ಹಾಡಿದ್ದಾರೆ. ಯಾವುದಾದರೂ ರಾಯಧನ ನೀಡಿ ಹೀಗೆ ಮಾಡಿದ್ದಾರೆಯೇ. ಸಂಗೀತ ನಿರ್ದೇಶಕ ಕೇವಲ ರಾಗ ಹಾಕುತ್ತಾನೆ. ಹಾಡುರಚನಾಕಾರ ಹಾಡು ಬರೆಯುತ್ತಾನೆ.ಗಾಯಕ ಹಾಡುತ್ತಾನೆ. ವಾದ್ಯೋಪಕರಣಗಳು ಹಿನ್ನೆಲೆ ಒದಗಿಸುತ್ತವೆ. ಹಾಗೆಂದಾದರೆ ಇವರೆಲ್ಲರಿಗೂ ರಾಯಧನ ನೀಡಬೇಡವೆ. ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುವವರು ಈಹಿಂದೆಯೇ ತಮ್ಮ ಸಂಭಾವನೆಯನ್ನು ಪಡೆದವರಾಗಿರಬಹುದು ಎಂದು ಗಂಗೈ ಅಮರನ್ ಹೇಳಿದರು.

ಇಳಯರಾಜ ಜೀನಿಯಸ್ ಎನ್ನುವ ವಿಷಯದಲ್ಲಿ ಯಾರಿಗೂ ಭಿನ್ನಭಿಪ್ರಾಯವಿಲ್ಲ. ಆದರೆ, ಅವರಿಗೆ ಬುದ್ಧಿಯಿಲ್ಲ. ಯಾರೋ ಹೇಳುವುದನ್ನು ಕೇಳಿ ಏನೇನೋ ಮಾಡುತ್ತಿದ್ದಾರೆ. ಎಪ್ರಿಲ್ 12ಕ್ಕೆ ಉಪಚುನಾವಣೆ ನಡೆಯಲಿರುವ ಆರ್‌ಕೆ ನಗರ್ ಕ್ಷೇತ್ರದಲ್ಲಿ ಗಂಗೈಅಮರನ್ ಬಿಜೆಪಿ ಅಭ್ಯರ್ಥಿ ಕೂಡಾ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News